ರಾತ್ರಿ ವೇಳೆ ಪ್ರೇಯಸಿಯ ಮನೆಗೆ ನುಗ್ಗಿದ ಪ್ರಿಯಕರ..ಮುಂದಾಗಿದ್ದು ಮಾತ್ರ...!!
Sunday, July 25, 2021
ಮುಜಫ್ಫರ್ಪುರ : ಪ್ರೇಮ ಪ್ರಕರಣದ ಹಿನ್ನೆಲೆಯಲ್ಲಿ, 17 ವರ್ಷದ ಯುವಕನನ್ನು ಹುಡುಗಿಯ ಮನೆಯವರು ಥಳಿಸಿ ಸಾಯಿಸಿ, ಆತನ ಮರ್ಮಾಂಗವನ್ನು ಕತ್ತರಿಸಿ ಹಾಕಿರುವ ಘಟನೆ ಬಿಹಾರದಲ್ಲಿ ನಡೆದಿದೆ.
ಮುಜಫ್ಫರ್ಪುರ ಜಿಲ್ಲೆಯ ರೇಪುರ ರಾಮಪುರಷಾ ಗ್ರಾಮದ ನಿವಾಸಿಯಾಗಿದ್ದ ಸೌರಭ್ ಕುಮಾರ್ ಕೊಲೆಯಾದ ದುರ್ದೈವಿ. ಈತ ತನ್ನ ಪ್ರೇಯಸಿಯನ್ನು ಭೇಟಿ ಮಾಡಲು ಆಕೆಯ ಮನೆಗೆ ಹೋಗಿದ್ದ. ರಾತ್ರಿಯಲ್ಲಿ ಮನೆಗೇ ಪ್ರವೇಶ ಮಾಡಿದ ಆತನ ಬಗ್ಗೆ ಕೋಪಗೊಂಡ ಹುಡುಗಿಯ ಮನೆಯವರು ಅವನನ್ನು ಥಳಿಸಿ ಅವನ ಮರ್ಮಾಂಗವನ್ನು ಕತ್ತರಿಸಿ ಹಾಕಿದ್ದಾರೆ.
ತಕ್ಷಣವೇ ಆತನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾದರೂ ಆತ ಬದುಕುಳಿಯಲಿಲ್ಲ. ಕಾಂತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಶಂಕಿತ ಆರೋಪಿ ಸುಶಾಂತ್ ಪಾಂಡೆ ಎಂಬುವವನನ್ನು ಬಂಧಿಸಲಾಯಿತು. ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತದೇಹವನ್ನು ಆತನ ಕುಟುಂಬದವರಿಗೆ ಒಪ್ಪಿಸಲಾಗಿದೆ.