ಪಕ್ಕದಮನೆ ಯುವಕನೊಂದಿಗೆ ಲವ್ವಿ-ಡವ್ವಿ... ಮೂರು ಮಕ್ಕಳೊಂದಿಗೆ ಪರಾರಿಯಾದ ತಾಯಿ..!!
Sunday, July 25, 2021
ಹೈದರಾಬಾದ್: ತನಗಿಂತ ವಯಸ್ಸಿನಲ್ಲಿ ಕಿರಿಯವನಾದ ಯುವಕ ಪರಿಚಯದಿಂದ ಮಹಿಳೆಯೊಬ್ಬಳ ವೈವಾಹಿಕ ಜೀವನ ಹಾಳಾಗಿದ್ದು ಮೂವರು ಹೆಣ್ಣು ಮಕ್ಕಳ ಜತೆ ಮಹಿಳೆಯು ಕಣ್ಮರೆಯಾಗಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿವೆ.
ಕಿಶನ್ ಶರ್ಮಾ ಮತ್ತು ಪೂಜಾ (34) ದಂಪತಿಗೆ 16 ವರ್ಷದ ಹಿಂದೆ ಮದುವೆಯಾಗಿದ್ದು, ಮೂವರು ಹೆಣ್ಣು ಮಕ್ಕಳಿದ್ದಾರೆ. ಪೂಜಾ ಕುಟುಂಬ ಮಲಕ್ಪೇಟೆಯಲ್ಲಿ ನೆಲೆಸಿದ್ದಾಗ ಅವರ ಮನೆಯ ಎದುರು ವಾಸವಿದ್ದ ಪವನ್ (30) ಎಂಬಾತನ ಪರಿಚಯ ಆಗಿರುತ್ತದೆ. ಇದು ಕಿಶನ್ಗೆ ತಿಳಿದು, ದಂಪತಿ ನಡುವಿನ ವಿರಸಕ್ಕೆ ಕಾರಣವಾಗಿರುತ್ತದೆ.
ಈ ಕಾರಣದಿಂದಾಗಿ ಕಿಶನ್ ಕುಟುಂಬ ಮಲಕ್ಪೇಟೆಯಿಂದ ಕಾಮಾಟಿಪುರ ಮುರಳಿಗುಮ್ಮಾಸ್ ಏರಿಯಾಗಿ 8 ತಿಂಗಳ ಹಿಂದೆ ಸ್ಥಳಾಂತರಗೊಂಡಿರುತ್ತಾರೆ. ಆದರೆ ಪೂಜಾ ಪವನ್ ಜೊತೆ ಮಾತನಾಡುವುದನ್ನು ಮುಂದುವರಿಸುತ್ತಾಳೆ. ಈ ಕಾರಣದಿಂದ ಗಂಡ - ಹೆಂಡತಿ ನಡುವೆ ಮತ್ತೆ ಜಗಳವಾಗುತ್ತದೆ. ಹೀಗಿರುವಾಗ ಪೂಜಾ ತನ್ನ ಹೆಣ್ಣು ಮಕ್ಕಳ ಜೊತೆ ತಿರುಪತಿಗೆಂದು ತೆರಳುತ್ತಾರೆ. ಆದರೆ, ಮತ್ತೆ ಹಿಂದಿರುವುದೇ ಇಲ್ಲ. ಇದರಿಂದ ಗಾಬರಿಗೆ ಒಳಗಾಗುವ ಕಿಶನ್ ಕಾಮಾಟಿಪುರ ಪೊಲೀಸ್ ಠಾಣೆಗೆ ತೆರಳಿ ನಾಪತ್ತೆ ಪ್ರಕರಣ ದಾಖಲಿಸುತ್ತಾರೆ. ಪವನ್ ಜತೆ ಓಡಿ ಹೋಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.