-->
ಜುಲೈ 26ರಿಂದ ರಿಲಯನ್ಸ್ ಡಿಜಿಟಲ್ ಇಂಡಿಯಾ ಸೇಲ್ ಆರಂಭ: ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌, ಟಿವಿಗಳ ಮೇಲೆ ಭಾರಿ ಆಫರ್!

ಜುಲೈ 26ರಿಂದ ರಿಲಯನ್ಸ್ ಡಿಜಿಟಲ್ ಇಂಡಿಯಾ ಸೇಲ್ ಆರಂಭ: ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌, ಟಿವಿಗಳ ಮೇಲೆ ಭಾರಿ ಆಫರ್!

ಮುಂಬೈ: ರಿಲಯನ್ಸ್ ಡಿಜಿಟಲ್ ಸಂಸ್ಥೆ ದೇಶಾದ್ಯಂತ ಜುಲೈ 26ರಿಂದ ತನ್ನ ಅತೀದೊಡ್ಡ ಇಲೆಕ್ಟ್ರಾನಿಕ್ ಮಾರಾಟವಾದ 'ಡಿಜಿಟಲ್ ಇಂಡಿಯಾ ಸೇಲ್' ಅನ್ನು   ಪ್ರಾರಂಭಿಸುವುದಾಗಿ ಪ್ರಕಟಿಸಿದೆ. ಕಂಪನಿಯ ಪ್ರಕಾರ, ಈ ವಿಶೇಷ ಮಾರಾಟದ ಅವಧಿಯಲ್ಲಿ ಟಿವಿ ಮತ್ತಿತರ ಗೃಹೋಪಯೋಗಿ ವಸ್ತುಗಳು, ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳಿಗೆ ವಿವಿಧ ವಿಭಾಗಗಳಲ್ಲಿ ವಿಶೇಷ ಕೊಡುಗೆಗಳು ಲಭ್ಯವಾಗಲಿದೆ.

ಇದಲ್ಲದೆ, ಗ್ರಾಹಕರು ಎಸ್‌ಬಿಐ ಕ್ರೆಡಿಟ್ ಕಾರ್ಡ್ ವಹಿವಾಟಿನಲ್ಲಿ 5,000 ರೂ.ವರೆಗೆ ಉಳಿತಾಯ ಮಾಡಬಹುದಾಗಿದು. ಜುಲೈ 22ರಿಂದ ಆಗಸ್ಟ್ 5, 2021ರವರೆಗೆ ಕನಿಷ್ಠ 10,000 ರೂ. ವಹಿವಾಟಿನಲ್ಲಿ ಶೇ.10ರಷ್ಟು ಕ್ಯಾಶ್‌ಬ್ಯಾಕ್ ಪಡೆಯಬಹುದು. ರಿಲಯನ್ಸ್ ಡಿಜಿಟಲ್ ಇಂಡಿಯಾ ಸೇಲ್ಸ್ ಅಮೆಜಾನ್ ಪ್ರೈಮ್ ಡೇ ಸೇಲ್ಸ್ (ಜುಲೈ 26 ಮತ್ತು 27) ಮತ್ತು ಫ್ಲಿಪ್ಕಾರ್ಟ್ ಬಿಗ್ ಸೇವಿಂಗ್ ಡೇಸ್ (ಜುಲೈ 25-29)ನೊಂದಿಗೆ ನಡೆಯಲಿದೆ ಎಂದು ರಿಲಯನ್ಸ್ ಸಂಸ್ಥೆ ತಿಳಿಸಿದೆ.

ಸ್ಮಾರ್ಟ್‌ಫೋನ್ ವಿಭಾಗದಲ್ಲಿ, ಒನ್​ಪ್ಲಸ್ ನಾರ್ಡ್ 2 ಸ್ಮಾರ್ಟ್‌ಫೋನ್ ಜುಲೈ 28ರಂದು ಬಿಡುಗಡೆಯಾದ ಬಳಿಕ ಮಾರಾಟಕ್ಕೆ ಲಭ್ಯವಿರುತ್ತದೆ. ಜುಲೈ 31ರವರೆಗೆ ಆಯ್ದ ಫೋನ್‌ಗಳ ಖರೀದಿಯಲ್ಲಿ ಆಕಸ್ಮಿಕ ಹಾನಿ ಮತ್ತು ದ್ರವ ಹಾನಿ ಕವರೇಜ್‌ಗಳು ಲಭ್ಯವಿದೆ. ಧರಿಸಬಹುದಾದ ವಿಭಾಗದಲ್ಲಿ, ಆ್ಯಪಲ್ ವಾಚ್ ಸರಣಿ 6 ಸೆಲ್ಯುಲಾರ್ 44 ಎಂಎಂ ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ ಆಕ್ಟಿವ್ 2 ರಿಯಾಯಿತಿಯಲ್ಲಿ ಲಭ್ಯ ಇರುತ್ತದೆ. ಲ್ಯಾಪ್‌ಟಾಪ್ ವಿಭಾಗದಲ್ಲಿ ಗ್ರಾಹಕರು 14,990 ರೂ.ವರೆಗೆ ಪ್ರಯೋಜನ ಪಡೆಯಬಹುದಾಗಿದೆ. ಬ್ಯಾಂಕ್ ಕ್ಯಾಶ್‌ಬ್ಯಾಕ್ ಮತ್ತು ಬ್ರ್ಯಾಂಡ್ ಖಾತರಿ ಕೊಡುಗೆಗಳ ಜೊತೆಗೆ ಇದು ಇರಲಿದೆ.16 ಜಿಬಿ ರ‍್ಯಾಮ್ ಮತ್ತು 4 ಜಿಬಿ ಎನ್​ಡಿಯಾ ಜೀಫೋರ್ಸ್ ಜಿಟಿಎಕ್ಸ್ 1650 ಗ್ರಾಫಿಕ್ಸ್ ಹೊಂದಿರುವ ಆಸಸ್ 10ನೇ ಜನರೇಷನ್ ಐ 5 ಗೇಮಿಂಗ್ ಲ್ಯಾಪ್​ಟಾಪ್ 64,999 ರೂ.ಗಳಲ್ಲಿ ಲಭ್ಯವಿದೆ. ಅಲ್ಲದೆ, ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ 7000 ರೂ.ಗಳ ವಿಶೇಷ ಎಚ್‌ಡಿಎಫ್‌ಸಿ ಕ್ಯಾಶ್‌ಬ್ಯಾಕ್‌ನೊಂದಿಗೆ 1,12,990 ರೂ.ಗಳ ಫ್ಲಾಟ್ ಬೆಲೆಯಲ್ಲಿ ಮ್ಯಾಕ್‌ಬುಕ್ ಪ್ರೊ ಲಭ್ಯವಾಗಲಿದೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99