ಕೇರಳಮದುವೆಯಾಗುವುದಾಗಿ ನಂಬಿಸಿ ಮಹಿಳೆಯ ಕಿಡ್ನಿ ಮಾರಿ ಪರಾರಿ..!!
Monday, July 19, 2021
ಕೊಚ್ಚಿ (ಕೇರಳ): ಮದುವೆಯಾಗುವುದಾಗಿ ಮಹಿಳೆಯೊಬ್ಬಳ ಜತೆ ಸಂಬಂಧ ಬೆಳೆಸಿ ನಂತರ ಆಕೆಯ ಕಿಡ್ನಿಯನ್ನು ಮಾರಿ ಆತ ಎಂಟು ಲಕ್ಷ ರೂಪಾಯಿಗಳ ಜತೆ ಪರಾರಿಯಾಗಿರುವ ಘಟನೆ ಕೊಚ್ಚಿಯಲ್ಲಿ ನಡೆದಿದೆ.
43 ವರ್ಷದ ಮಹಿಳೆ ಸೋಫಿಯಾ, ಜೊತೆ ಮೊಹಮ್ಮದ್ ರನೀಶ್ ಹಲವು ವರ್ಷದಿಂದ ಲಿವ್ ಇನ್ ರಿಲೇಷನ್ನಲ್ಲಿ ಇದ್ದರು. ಹಣದ ಸಮಸ್ಯೆ ಇದ್ದ ಕಾರಣ, ಅದನ್ನು ಕೊನೆಗಾಣಿಸಲು ಕಿಡ್ನಿ ಮಾರಲು ಸೋಫಿಯಾರನ್ನು ಈತ ಒಪ್ಪಿಸಿದ್ದಾನೆ. ನಾಲ್ಕನೆಯ ತರಗತಿಯವರೆಗೆ ಮಾತ್ರ ಕಲಿತಿರುವ ಸೋಫಿಯಾಳದಿಂದ ಯಾವ್ಯಾವುದೋ ದಾಖಲೆಗಳಿಗೆ ಆತ ಸಹಿ ಹಾಕಿಸಿಕೊಂಡಿದ್ದಾನೆ. ಸ್ವ ಇಚ್ಛೆಯಿಂದ ಮೂತ್ರಪಿಂಡ ದಾನ ಮಾಡುತ್ತಿರುವುದಾಗಿ ಒಪ್ಪಿಗೆ ಸೂಚಿಸುವ ದಾಖಲೆ ಅದಾಗಿವೆ. ನಂತರ ಶಸ್ತ್ರಚಿಕಿತ್ಸೆ ಮೂಲಕ ಕಿಡ್ನಿ ತೆಗೆಸಿರುವ ಆತ, ಅದನ್ನು ಎಂಟು ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾನೆ. ಸಿಕ್ಕ ಹಣವನ್ನು ತನ್ನ ಬ್ಯಾಂಕ್ ಖಾತೆಗೆ ಈಕೆಯಿಂದ ವರ್ಗಾವಣೆ ಮಾಡಿಸಿಕೊಂಡಿದ್ದಾನೆ. ನಂತರ ಅಲ್ಲಿಂದ ಪರಾರಿಯಾಗಿದ್ದಾನೆ.
ಮಹಿಳೆ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಆರೋಪಿ ಮೊಹಮ್ಮದ್ ರನೀಶ್ ಹುಡುಕಾಟದಲ್ಲಿ ಪೊಲೀಸರು ತೊಡಗಿದ್ದಾರೆ.