ಸಾಮಾಜಿಕ ಜಾಲತಾಣದಲ್ಲಿ ಯುವತಿಯ ಸಹವಾಸ ಬಯಸಿದ ವಿದ್ಯಾರ್ಥಿಗೆ ಆಗಿದ್ದೇನು ಗೊತ್ತಾ..?
Monday, July 19, 2021
ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಯುವತಿಯ ಸಹವಾಸ ಮಾಡಿದ 24 ವರ್ಷದ ವಿದ್ಯಾರ್ಥಿಯಿಂದ ಹಂತ ಹಂತವಾಗಿ 38 ಸಾವಿರ ರೂ. ವಸೂಲಿ ಮಾಡಿ ಸೈಬರ್ ಕಳ್ಳರು ವಂಚನೆ ಮಾಡಿದ್ದಾರೆ.
ಈತ ಮೇ 13ರಂದು ವೆಬ್‌ಸೈಟ್‌ವೊಂದರಲ್ಲಿ ಯುವತಿಯ ಸಹವಾಸ ಬಯಸಿ ಮೊಬೈಲ್ ಫೋನ್ ನಂಬರ್ ಅಪ್‌ಲೋಡ್ ಮಾಡಿದ್ದ. ಇದನ್ನು ಗಮನಿಸಿದ ಅಪರಿಚಿತ ಮಹಿಳೆ, ವಿದ್ಯಾರ್ಥಿ ಮೊಬೈಲ್ ಫೋನ್ ನಂಬರ್‌ಗೆ ಕರೆ ಮಾಡಿ ‘ನನಗೆ ಇಷ್ಟವಿದೆ. ನಾನು ನಿನ್ನ ಹತ್ತಿರ ಬರುತ್ತೇನೆ’ ಎಂದು ಹೇಳಿ ಮುಂಗಡವಾಗಿ ಗೂಗಲ್ ಪೇನಲ್ಲಿ ಹಣ ವರ್ಗಾವಣೆ ಮಾಡಿಕೊಂಡಿದ್ದಾಳೆ. ಸ್ವಲ್ಪ ದಿನ ಬಿಟ್ಟು ಮತ್ತೆ ಬೇರೊಂದು ಕಾರಣ ಹೇಳಿ ಮತ್ತೆ ಹಣ ಪಡೆದುಕೊಂಡಿದ್ದಾಳೆ. ಇದೇ ರೀತಿ ಮಾಡಿಸಿಕೊಂಡು 38 ಸಾವಿರ ರೂಪಾಯಿ ಹಣ ಪಡೆದಿದ್ದಾಳೆ.ಕೊನೆಗೆ ಯುವತಿ ಮೋಸ ಮಾಡುತ್ತಿರುವುದು ಗೊತ್ತಾಗಿ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಎಫ್ ಐಆರ್ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಈಶಾನ್ಯ ವಿಭಾಗ ಸಿಇಎನ್ ಪೊಲೀಸರು ತಿಳಿಸಿದ್ದಾರೆ.