ಬೆತ್ತಲೆ ವಿಡಿಯೋ ಚಿತ್ರಿಕರಣ ವಿಚಾರ -ನಟಿ ಶಿಲ್ಪಾ ಶೆಟ್ಟಿ ವಿಚಾರಣೆ...
Saturday, July 24, 2021
ರಾಜ್ ಕುಂದ್ರಾ ಒಡೆತನದ ವಿಯಾನ್ ಕಂಪನಿಯ ನಿರ್ದೇಶಕರಾಗಿರುವ ಬಗ್ಗೆಯೂ ಶಿಲ್ಪಾ ಶೆಟ್ಟಿ ಅವರನ್ನು ಪ್ರಶ್ನಿಸಿದ್ದಾರೆ. ವಿಯಾನ್ ಕಚೇರಿಯಿಂದ ಆಪಾದಿತ ಅಶ್ಲೀಲ ಕೃತ್ಯ ನಡೆಸಲಾಗುತ್ತಿತ್ತು ಎನ್ನಲಾಗಿದೆ. 2020ರಲ್ಲಿ ನಿರ್ದೇಶಕ ಹುದ್ದೆಗೆ ಶಿಲ್ಪಾ ರಾಜೀನಾಮೆ ನೀಡಿದ್ದರು.ಇತ್ತೀಚೆಗೆ ಮುಂಬೈನ ಅಂಧೇರಿ ವೆಸ್ಟ್‌ನಲ್ಲಿರುವ ವಯಾನ್ ಕಚೇರಿಗೆ ಭೇಟಿ ನೀಡಿದ್ದ ಪೊಲೀಸರು, ಅಶ್ಲೀಲ ಚಲನಚಿತ್ರಗಳ ಬೃಹತ್ ಡೇಟಾ ವಶಪಡಿಸಿಕೊಂಡಿದ್ದರು.
ರಾಜ್ ಕುಂದ್ರಾ ಅವರು ಲಂಡನ್ ಮೂಲದ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡು, ಮೊಬೈಲ್ ಆ್ಯಪ್ ಮೂಲಕ ಅಶ್ಲೀಲ ವಿಡಿಯೋ ಸ್ಟ್ರೀಮಿಂಗ್ ಮಾಡುವ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಮುಂಬೈ ಪೊಲೀಸರು ಇತ್ತೀಚೆಗೆ ತಿಳಿಸಿದ್ದಾರೆ.