
ಹಿರೋಯಿನ್ಸ್ ಎಂದರೆ ಹೈ ಪ್ರೊಫೈಲ್ಸ್ ವೇಶ್ಯೆರಂತೆ ನೋಡಲಾಗುತ್ತದೆ: ನಟಿ ಮಹಿಕಾ ಶರ್ಮಾ
Tuesday, July 27, 2021
ಮುಂಬೈ: ಚಿತ್ರರಂಗದಲ್ಲಿ ನಟಿಯರನ್ನು ಬೋಗದ ವಸ್ತುವಿನ ರೀತಿ ನೋಡುತ್ತಾರೆ.ಬಣ್ಣದ ಲೋಕದಲ್ಲಿ ನಟಿಯರನ್ನು ಸದಾ ಲೈಂಗಿಕ ವಸ್ತುಗಳಂತೆ ಪರಿಗಣಿಸಲಾಗುತ್ತಿದೆ ಎಂದು ಬಾಲಿವುಡ್ ನಟಿ ಮಹಿಕಾ ಶರ್ಮಾ ಈ ಬಗ್ಗೆ ಹೇಳಿದ್ದಾರೆ.
ಉದ್ಯಮದಲ್ಲಿ ಮುಂದುವರಿಯಬೇಕಾದರೆ, ನೀವು ಯಾವುದಾದರೂ ತ್ಯಾಗ ಮಾಡಲೇ ಬೇಕು ಎಂದು ಬಹಳಷ್ಟು ಮಂದಿ ನನಗೆ ಹೇಳಿದ್ದಾರೆ. ಕೆಲವರು ಬಲವಂತ ಮಾಡಿದರೆ, ಮತ್ತೆ ಕೆಲವರು ಅವಕಾಶ ನೀಡುವ ಆಸೆ ಹುಟ್ಟಿಸಿ ಬಲೆಗೆ ಬೀಳಿಸಿಕೊಳ್ಳುತ್ತಾರೆ. ಅದರಲ್ಲೂ ಸಿನಿಮಾ ಹಿನ್ನೆಲೆ ಹೊಂದಿರದ ನಟಿಯರು ಬೆಳೆಯುವುದು ತುಂಬಾ ಕಷ್ಟ ಎಂದಿದ್ದಾರೆ.
ಯುವತಿಯರನ್ನು ಅವರು ಕೇವಲ ಲೈಂಗಿಕ ವಸ್ತುಗಳಂತೆ ನೋಡುತ್ತಾರೆ. ಇನ್ನೂ ಯಾವುದೇ ಹಿನ್ನೆಲೆ ಇಲ್ಲದೆ ಬರುವ ಹುಡುಗಿಯರ ಪರಿಸ್ಥಿತಿ ಕೆಟ್ಟದಾಗಿರುತ್ತದೆ. ಸಮಾಜ ಕೂಡ ಸಿನಿಮಾದವರನ್ನು ನೋಡುವ ದೃಷ್ಟಿಕೋನ ಬೇರೆಯಾಗಿರುತ್ತದೆ. ಹಿರೋಯಿನ್ಸ್ ಎಂದರೆ ಹೈ ಪ್ರೊಫೈಲ್ಸ್ ವೇಶ್ಯೆರಂತೆ ನೋಡಲಾಗುತ್ತದೆ ಎಂದಿದ್ದಾರೆ.