ಬೈಂದೂರು: ಮನೆ ಸಮೀಪದ ಹೊಳೆಗೆ ಬಿದ್ದು 2 ವರ್ಷದ ಮಗು ಮೃತ್ಯು...
Tuesday, July 27, 2021
ಕರ್ಕಿಕಳಿಯ ವಿಶ್ವನಾಥ ಖಾರ್ವಿ ಎಂಬವರ ಪುತ್ರ ಸರ್ವದ ಮೃತ ಮಗು. ಇವರು ಮನೆಯ ಕೋಣೆಯಲ್ಲಿ ಮಗುವನ್ನು ಮಲಗಿಸಿ ಉಪ್ಪುಂದ ಪೇಟೆಗೆ ಹೋಗಿದ್ದು, ಅಪರಾಹ್ನ 3:30ರಿಂದ ಸಂಜೆ 4 ಗಂಟೆ ಮಧ್ಯಾವಧಿಯಲ್ಲಿ ಮಗು ಎದ್ದು ಮನೆಯಿಂದ ಹೊರಗೆ ಬಂದಿತ್ತೆನ್ನಲಾಗಿದೆ. ಮಗು ಮನೆಯ ಸಮೀಪ ಹರಿಯುವ ಹೊಳೆಯ ದಡದಲ್ಲಿ ನಡೆದುಕೊಂಡು ಹೋಗುವಾಗ ಆಕಸ್ಮಿಕವಾಗಿ ಕಾಲು ಜಾರಿ ಹೊಳೆಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದೆ ಎಂದು ತಿಳಿದು ಬಂದಿದೆ.
ಉಪ್ಪುಂದ-ಕರ್ಕಿಕಳಿ ಬ್ರೇಕ್ ವಾಟರ್ ಸಮೀಪ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‘