‘ವಿಕ್ರಾಂತ್ ರೋಣ’ ಸಿನಿಮಾ ಹಾಡಿನ ನೃತ್ಯಕ್ಕೆ ಜಾಕ್ವೆಲಿನ್ ಫರ್ನಾಂಡೀಸ್ ಪಡೆಯುತ್ತಿರುವ ಸಂಭಾವನೆ ಎಷ್ಟು ಕೋಟಿ ?
Thursday, July 8, 2021
ಬೆಂಗಳೂರು: ವಿಕ್ರಾಂತ್ ರೋಣದ ಸಿನಿಮಾದ ಹಾಡೊಂದಕ್ಕೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಡೀಸ್‍ರವರು ಸ್ಟೆಪ್ ಹಾಕುತ್ತಿರುವ ವಿಚಾರ ಹಳೆಯದ್ದು. ಆಕೆ ಹಾಡಿಗೆ ಕುಣಿಯಲು ಎಷ್ಟು ಸಂಭಾವೆ ಪಡೆಯುತ್ತಿದ್ದಾರೆ ಎನ್ನುವುದು ಬಹು ಚರ್ಚೆಯಲ್ಲಿದೆ.
ಬಹು ಕೋಟಿ ರೂ. ವೆಚ್ಚದಲ್ಲಿ ತಯಾರಾಗುತ್ತಿರುವ ಕಿಚ್ಚ ಸುದೀಪ್ ಅಭಿನಯದ ಬಹುಭಾಷೆಯಲ್ಲಿ ತಯಾರಾಗುತ್ತಿರುವ ವಿಕ್ರಾಂತ್ ರೋಣ ಸಿನಿಮಾ ತ್ರಿಡಿ ಟೆಕ್ನಾಲಜಿಯಲ್ಲಿ ತೆರೆ ಮೇಲೆ ಬರಲಿದೆ. ಸದ್ಯ ಸಿನಿಮಾದ ಚಿತ್ರೀಕರಣ ಕಂಪ್ಲೀಟ್ ಆಗಿದ್ದು, ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಇದೆ. ಈ ಸಿನಿಮಾದ ಹಾಡೊಂದಕ್ಕೆ ಫೆರ್ನಾಡೀಸ್ ನೃತ್ಯ ಮಾಡಲಿದ್ದಾರೆ. ಸಿನಿಮಾದಲ್ಲಿ ಬರುವ ಕೇವಲ 5 ನಿಮಿಷದ ಹಾಡಿಗೆ ಡ್ಯಾನ್ಸ್ ಮಾಡಲು ಗ್ರೀನ್ ಸಿಗ್ನಲ್ ನೀಡುವ ಜಾಕ್ವೆಲಿನ್, ಇದಕ್ಕಾಗಿ ಬರೋಬ್ಬರಿ 3 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.
ಮೇ ತಿಂಗಳಿನಲ್ಲಿಯೇ ನಡೆಯಬೇಕಾಗಿದ್ದ ಹಾಡಿನ ಶೂಟಿಂಗ್, ಕೊರೊನಾ ಲಾಕ್‍ಡೌನ್‍ನಿಂದಾಗಿ ಸ್ಥಗಿತಗೊಂಡಿತ್ತು. ಇದೀಗ ಬೆಂಗಳೂರಿನಲ್ಲಿಯೇ ಹಾಡನ್ನು ಚಿತ್ರೀಕರಿಸಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. ಈ ಹಾಡಿಗೆ ಜಾನಿ ಮಾಸ್ಟರ್ ನೃತ್ಯ ನಿರ್ದೇಶನ ಮಾಡಲಿದ್ದಾರೆ.