ವಿಕ್ರಾಂತ್ ರೋಣ ಸಿನಿಮಾದಲ್ಲಿ ಸುದೀಪ್ ಅವರೊಂದಿಗೆ ಅದ್ಭುತ ಕಾಲ ಕಳೆದೆ- ನಟಿ ಜಾಕ್ವೆಲಿನ್
Wednesday, July 21, 2021
ಮುಂಬೈ: ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ವಿಕ್ರಾಂತ್ ರೋಣ ಸಿನಿಮಾದಲ್ಲಿ ಅಭಿನಯಿಸಿದರ ಕುರಿತು ತಮ್ಮ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಈ ಕುರಿತಂತೆ ಜಾಕ್ವೆಲಿನ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದು, ವಿಕ್ರಾಂತ್ ರೋಣ ಚಿತ್ರೀಕರಣದ ವೇಳೆ ಕಿಚ್ಚ ಸುದೀಪ್ ಅವರೊಂದಿಗೆ ಅದ್ಭುತ ಕಾಲ ಕಳೆದೆ. ಶಾಲಿನಿ ಹಾಗೂ ಜಾಕ್ ಮಂಜುರವರ ಸ್ವಾಗತ ಮತ್ತು ಆತಿಥ್ಯಕ್ಕೆ ಧನ್ಯವಾದಗಳು.
ಕಿಚ್ಚ ಸುದೀಪ್ ಅವರೊಟ್ಟಿಗೆ ದೀರ್ಘಕಾಲದಿಂದ ಕೆಲಸ ಮಾಡಿದ ಅನುಭವ. ಮುಂದಿನ ಬಾರಿ ಟಫ್ ಚೆಸ್ ಆಟಕ್ಕೆ ಸಿದ್ಧರಾಗಿ. ಅನೂಪ್ ಭಂಡಾರಿ ನಿಮ್ಮ ಯೋಜನೆಗಳ ಬಗೆಗಿನ ಸ್ಪಷ್ಟತೆ ಮತ್ತು ವಿಕ್ರಾಂತ್ ರೋಣ ಚಿತ್ರೀಕರಿಸುತ್ತಿರುವ ರೀತಿ ಅದ್ಭುತವಾಗಿದೆ. ಇಡೀ ಚಿತ್ರತಂಡಕ್ಕೆ ಧನ್ಯವಾದ. ಮತ್ತೆ ಶೀಘ್ರದಲ್ಲಿಯೇ ಸಿಗೋಣಾ. ವಿಕ್ರಾಂತ್ ರೋಣ ಸಿನಿಮಾ ಖಂಡಿತಾ ಭಾರತವನ್ನು ಜಾಗತಿಕ ಮಟ್ಟದಲ್ಲಿ ಹೆಮ್ಮೆ ಪಡಿಸುತ್ತದೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.