ಬ್ರೇಕಿಂಗ್ ನ್ಯೂಸ್
ಲೋಡ್ ಆಗುತ್ತಿದೆ...

ಎರಡನೇ ಮಗುವಿಗೆ ತಾಯಿಯಾಗುವ ವಿಚಾರ ಹಂಚಿಕೊಂಡ ನಟಿ ನೇಹಾ ಧೂಪಿಯಾ..

 
ಮುಂಬೈ: ಬಾಲಿವುಡ್ ನಟಿ ನೇಹಾ ಧೂಪಿಯಾ ಎರಡನೇ ಮಗುವಿಗೆ ತಾಯಿಯಾಗುತ್ತಿರುವ ವಿಚಾರವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. 

ಬೇಬಿ ಬಂಪ್​ ಹೊತ್ತಿರುವ ನೇಹಾ ತಮ್ಮ ಪತಿ ಅಂಗದ್ ಮತ್ತು ಮಗಳು ಮೆಹ್ರ್ ಜತೆ ಇರುವ ಫೋಟೊವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ನೇಹಾ ಬೇಬಿ ಬಂಪ್ ಹಿಡಿದುಕೊಂಡಿದ್ದರೆ, ಮೆಹ್ರ್​ಳನ್ನು ಎತ್ತಿಕೊಂಡಿರುವ ಅಂಗದ್ ಫೋಟೋಕ್ಕೆ ಪೋಸ್ ಕೊಟ್ಟಿದ್ದಾರೆ. ಮೆಹ್ರ್ ಅಮ್ಮನ ಹೊಟ್ಟೆಯನ್ನೇ ನೋಡುತ್ತಿದ್ದಾಳೆ. ಈ ಫೋಟೋದೊಂದಿಗೆ ನೇಹಾ, “ಈ ಕ್ಯಾಪ್ಶನ್​ ಹುಡುಕಲು ಎರಡು ದಿನ ತೆಗೆದುಕೊಂಡಿದ್ದೇವೆ. ನಾವು ಯೋಚಿಸಬಹುದಾದ ಅತ್ಯುತ್ತಮವಾದದ್ದೆಂದರೆ ಅದು ಧನ್ಯವಾದಗಳು, ದೇವರೇ.” ಎಂದು ಬರೆದುಕೊಂಡಿದ್ದಾರೆ. 
ಇತ್ತೀಚಿನ ಸುದ್ದಿಗಳು
×

WhatsApp Group

ಕ್ಷಣ ಕ್ಷಣದ ಸುದ್ದಿಗಳನ್ನು ವಾಟ್ಸಪ್‌ನಲ್ಲಿ ಪಡೆಯಿರಿ.

JOIN NOW