
ನೀರಿನ ಮಧ್ಯೆಯಿಂದ ಇದ್ದಕ್ಕಿದ್ದಂತೆಯೇ ಮೇಲೆದ್ದ ಬಂದ ಭೂಮಿ!: ಅಚ್ಚರಿ ಎನಿಸಿದರೂ ಇದು ಸತ್ಯ (Video)
Saturday, July 24, 2021
ದೆಹಲಿ: ನೋಡು ನೋಡುತ್ತಿರುವಂತೆ ನೀರಿನ ಮಧ್ಯೆಯಿಂದ ಭೂಮಿ ಮೇಲ್ಪದರವು ಮೇಲೆ ಬಂದಂತೆ ಕಾಣುವ ದೃಶ್ಯ ಒಂದು ಕ್ಷಣ ಎಲ್ಲರನ್ನೂ ಬೆರಗು ಮೂಡಿಸುತ್ತದೆ. ಅಚ್ಚರಿ ಮೂಡಿಸುವ ಈ ದೃಶ್ಯವು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಇಂತಹ ಕುತೂಹಲ ಕೆರಳಿಸುವ ದೃಶ್ಯ ಹರಿಯಾಣದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. ಸ್ಥಳೀಯರು ಸೆರೆ ಹಿಡಿದಿರುವ ಮೊಬೈಲ್ ನಲ್ಲಿ ಈ ದೃಶ್ಯ ಸೆರೆಯಾಗಿದೆ. ನೀರಿನಿಂದ ಭೂಮಿಯು ಏಕಾಏಕಿ ಮೇಲೆ ಬರುವಂತೆ ಕಾಣುವ ದೃಶ್ಯ ಇದರಲ್ಲಿದೆ. ಈ ದೃಶ್ಯವನ್ನು ನೋಡುವಾಗಲೇ ಅಚ್ಚರಿಯಾಗುತ್ತದೆ.
ಜಗತ್ ವಾನಿ ಎಂಬವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿರುವ 1.58 ಸೆಕೆಂಡುಗಳ ಈ ಕ್ಲಿಪ್‌ನಲ್ಲಿ ನೀರಿನಿಂದ ಆವೃತ್ತವಾದ ಪ್ರದೇಶವು ಇದ್ದಕ್ಕಿದ್ದಂತೆ ಏರಲು ಪ್ರಾರಂಭಿಸುತ್ತದೆ. ಇದನ್ನು ಕಂಡು ಸ್ಥಳೀಯರು ಒಂದು ಕ್ಷಣ ಭಯಭೀತರಾಗುತ್ತದೆ. ಜೊತೆಗೆ, ಅಚ್ಚರಿಯಿಂದ ಈ ವಿಡಿಯೋವನ್ನು ಸೆರೆ ಹಿಡಿಯುತ್ತಾರೆ. ಈ ವಿಡಿಯೋವನ್ನು ಸೆರೆ ಹಿಡಿಯುತ್ತಿದ್ದ ವ್ಯಕ್ತಿ ಕೂಡಾ ಭಯದಿಂದ ಎಲ್ಲರನ್ನೂ ಹಿಂದೆ ನಿಲ್ಲುವಂತೆ ಹೇಳುವುದು ಕೂಡಾ ಕೇಳಿಸುತ್ತದೆ. ಒಟ್ಟಿನಲ್ಲಿ ಈ ದೃಶ್ಯವನ್ನು ಕಂಡಾಗ ಭೂಮಿಯು ತನ್ನ ಒಡಲೊಳಗೆ ಏನೆಲ್ಲಾ ವೈಚಿತ್ರ್ಯಗಳನ್ನು ಅಡಗಿಡಿಸಿಟ್ಟಿದೆಯೋ ಎಂದು ಖಂಡಿತಾ ಎಲ್ಲರಿಗೂ ಅಚ್ಚರಿ ಖಂಡಿತಾ ಆಗುತ್ತದೆ.