ಮಗನ ವಯಸ್ಸಿನವನ ಜೊತೆಯೆ ಪತ್ನಿಯ ಕಾಮದಾಟ...ಬಲಿಯಾಗಿದ್ದು ಮಾತ್ರ ಬಡಜೀವ..!!
Sunday, July 4, 2021
ಮಂಡ್ಯ: ಮಂಡ್ಯದ ತಗ್ಗಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪ ಪ್ರಾಂಶುಪಾಲರಾಗಿದ್ದ ಅಲ್ತಾಫ್ ಮೆಹದಿ ಅವರ ಸಾವಿನ ರಸಹ್ಯವನ್ನು ಪೊಲೀಸರು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
56 ವರ್ಷದ ಅಲ್ತಾಫ್ ಅವರು ಮಲಗಿದ್ದಲ್ಲಿಯೇ ಶವವಾಗಿದ್ದರು. ಹೃದಯಾಘಾತದಿಂದ ಪತಿ ಮೃತಪಟ್ಟಿರುವುದಾಗಿ ಪತ್ನಿ ರಿಜ್ವಾನಬಾನು ಹೇಳಿಕೆ ನೀಡಿದ್ದರು. ಆದರೆ ಅನುಮಾನಗೊಂಡ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ತನಿಖೆ ನಡೆಸಿದಾಗ ಹೆಂಡತಿಯೇ ಗಂಡನನ್ನು ತನ್ನ ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ.
2 ವರ್ಷಗಳ ಹಿಂದೆ ಫೇಸ್‌ಬುಕ್‌ನಲ್ಲಿ ರಿಜ್ವಾನಾಗೆ 27 ವರ್ಷದ ರೆಹಮತ್ ಉಲ್ಲಾ ಪರಿಚಯವಾಗಿದ್ದ. ವಯಸ್ಸಿಗೆ ಬಂದ ಮೂವರು ಮಕ್ಕಳಿದ್ದರೂ ತನ್ನ ಮಗನ ವಯಸ್ಸಿನವನ ಜತೆ ಅಕ್ರಮಸಂಬಂಧ ಹೊಂದಿದ್ದಳು ರಿಜ್ವಾನ್ .ರಿಜ್ವಾನಾ ರಹಮತ್ ಜೊತೆ ಕಾಮದಾಟಕ್ಕಿಳಿದಿದ್ದಳು. ವಿಷಯ ತಿಳಿದು ಹಲವು ಬಾರಿ ರಾಜಿ- ಪಂಚಾಯ್ತಿ ಠಾಣೆ ಮೆಟ್ಟಿಲೇರಿದ್ದರು ಪತಿ ಅಲ್ತಾಫ್. ಇದೀಗ ಅಕ್ರಮಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನು ಪ್ರಿಯಕರನ ಜತೆಗೂಡಿ ಜು.29ರಂದು ಮಧ್ಯರಾತ್ರಿ ದಿಂಬು ರಗ್ಗಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ಪೊಲೀಸರು ಹೇಳಿದ್ದಾರೆ.