ಪ್ರೀತಿಸುಂತೆ ಇನ್ನಿಲ್ಲದಂತೆ ಕಾಡಿದ್ದ ಹುಚ್ಚು ಪ್ರೇಮಿಯನ್ನು ಕಂಬಿ ಹಿಂದೆ ಕಳುಹಿಸಿದ ಪೊಲೀಸರು
Sunday, July 4, 2021
ಬೆಂಗಳೂರು : ‘ಐ ಲವ್ ಯೂ.. ಯು ಮಸ್ಟ್ ಐ ಲವ್ ಮಿ’ ಅಂತ ಯುವತಿಯನ್ನು ಇನ್ನಿಲ್ಲದಂತೆ ಕಾಡಿದ ಹುಚ್ಚು ಪ್ರೇಮಿಯನ್ನು, ಕೊನೆಗೂ ಪೊಲೀಸರು ಕಂಬಿ ಎಣಿಸುವಂತೆ ಮಾಡಿದ್ದಾರೆ.
ಬೆಂಗಳೂರಿನ ಚಂದ್ರ ಲೇಔಟ್ ನಿವಾಸಿ ರಾಜೇಶ್ ಬಂಧಿತ ಆರೋಪಿ. ಈತ ನಾಗರಭಾವಿಯ 22 ವರ್ಷದ ಯುವತಿಯನ್ನು ಪ್ರತಿನಿತ್ಯ ಫಾಲೋ ಮಾಡಿ ‘ಪ್ರೀತ್ಸೆ..ಪ್ರೀತ್ಸೆ’ ಅಂತ ಲವ್ ಮಾಡುವಂತೆ ಯುವತಿಯ ಬೆನ್ನುಬಿದ್ದಿದ್ದ. ಯುವತಿಯ ಸ್ನೇಹಿತರು ಮತ್ತು ಕ್ಲಾಸ್ಮೇಟ್ಸ್ಗೆ “ಅವಳು ನನ್ ಹುಡ್ಗಿ, ಮಾತಾಡಿಸಿದ್ರೆ ಅಷ್ಟೇ..” ಅಂತ ವಾರ್ನ್ ಮಾಡ್ತಿದ್ದ. ಯುವತಿಯ ಪೊಷಕರಿಗೂ ಕರೆ ಮಾಡಿದ್ದ ಆರೋಪಿ ರಾಜೇಶ್, “ನಿಮ್ ಮಗಳನ್ನು ಲವ್ ಮಾಡ್ತಿದೀನಿ, ನಾನೇ ಮದುವೆ ಆಗ್ತೀನಿ” ಅಂದಿದ್ದ.
ಅಲ್ಲದೆ ಯುವತಿ ಪ್ರೀತಿಗೆ ಒಲ್ಲೆ ಎಂದಿರುವುದಕ್ಕೆ "ಬ್ಲೇಡ್ ನಲ್ಲಿ ಕೈ ಹಾಗೂ ಕುತ್ತಿಗೆ ಕುಯ್ದುಕೊಳ್ತೀನಿ ಅಂತಲೂ ಹೆದರಿಸುತ್ತಿದ್ದ. ಸಾಯೋ ಹೊತ್ತಿನಲ್ಲಿ ನಿಮ್ಮಪ್ಪ ಅಮ್ಮನ ಹೆಸರನ್ನ ಬರೆದಿಡ್ತೀನಿ.. ಅವರು ಜೈಲಿಗೆ ಹೋಗ್ತಾರೆ.. ಸುಮ್ಮನೇ ನನ್ನ ಲವ್ ಮಾಡು..” ಅಂತ ಯುವತಿಯನ್ನು ಎಂದು ಬ್ಲಾಕ್ ಮೇಲ್ ಮಾಡ್ತಿದ್ದ. ಒಂದು ದಿನದ ಒಳಗಾಗಿ ಲವ್ ಪ್ರಪೊಸಲ್ ಒಪ್ಪಿಕೊಳ್ಳಬೇಕು ಎಂದು ಡೆಡ್ಲೈನ್ ಕೊಟ್ಟಿದ್ದ ಎನ್ನಲಾಗಿದೆ.
ಈತನ ಪ್ರಾಣಹಿಂಸೆ ಸಹಿಸಲಾಗದೆ, ಯುವತಿ ಮತ್ತು ಪೋಷಕರು ಚಂದ್ರ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿದ ಚಂದ್ರ ಲೇಔಟ್ ಪೊಲೀಸರು ಹುಚ್ಚು ಪ್ರೇಮಿ ರಾಜೇಶ್ನನ್ನು ಬಂಧಿಸಿ ಕಂಬಿ ಹಿಂದೆ ಕಳಿಸಿದ್ದಾರೆ.