ಇಷ್ಟವಿಲ್ಲದ ಹುಡುಗ..ಇಷ್ಟವಿಲ್ಲದ ಮದುವೆ... ಡೆತ್ ನೋಟ್ ಬರೆದು ಬಾವಿಗೆ ಹಾರಿದ ನವವಿವಾಹಿತೆ.!!
Friday, July 2, 2021
ನಾಗೌರ್ (ರಾಜಸ್ಥಾನ): ರಾಜಸ್ಥಾನದಲ್ಲಿ ಆಟಾ-ಸಾಟಾ ಎನ್ನುವ ಸಂಪ್ರದಾಯವಿದೆ.ಒಂದು ಮನೆಯ ಮಗಳನ್ನು ಇನ್ನೊಂದು ಮನೆಗೆ ಕೊಟ್ಟರೆ, ಆ ಮನೆಯ ಹೆಣ್ಣುಮಗಳನ್ನು ಈ ಮನೆಯ ಮಗನಿಗೆ ಕೊಡುವ ಸಂಪ್ರದಾಯವಿದು. ಈ ಸಾಂಪ್ರದಾಯಿಕ್ಕೆ ಸುಮನ್ ಚೌಧರಿ ಎಂಬ ನವವಿವಾಹಿತ ಹೆಣ್ಣುಮಗಳು ಬಲಿಯಾಗಿದ್ದಾಳೆ.
ಸುಮನ್ ಚೌಧರಿ ಎಂಬ ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈಕೆಯ ಸಹೋದರನಿಗೆ ಇನ್ನೊಂದು ಮನೆಯ ಹುಡುಗಿ ಇಷ್ಟವಾಗಿರುವ ಕಾರಣಕ್ಕೆ, ಸುಮನ್‌ಳಿಗೆ ಇಷ್ಟವಿಲ್ಲದಿದ್ದರೂ ಆ ಮನೆಯ ಹುಡುಗನ ಜತೆ ಮದುವೆ ಮಾಡಲಾಗಿತ್ತು. ಆದರೆ ವಿಚ್ಛೇದನಕ್ಕೂ ಈ ಸಂಪ್ರದಾಯದಲ್ಲಿ ಆಸ್ಪದವಿಲ್ಲ. ಇದರಿಂದ ಬೇಸತ್ತು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಾಯುವ ಮುನ್ನ ಈಕೆ ಇಷ್ಟವಿಲ್ಲದ ಮದುವೆ, ವಿಚ್ಛೇದನಕ್ಕೂ ಅವಕಾಶವಿಲ್ಲದ ಸಂಸಾರ ಇರುವ ಆಟಾ-ಸಾಟಾ ಸಂಪ್ರದಾಯ ಏಕೆ ಬೇಕು? ಈ ಸಂಪ್ರದಾಯವನ್ನು ನಡೆಸಿಕೊಂಡು ಬಂದಿರುವ ಈ ಸಮಾಜಕ್ಕೆ ಧಿಕ್ಕಾರ. ಪ್ರತಿಯೊಬ್ಬರಿಗೂ ಒಳ್ಳೆಯ ಹೆಣ್ಣು ಬೇಕು, ತಮ್ಮ ಮಗನಿಗೆ ಒಳ್ಳೆಯ ಹೆಣ್ಣನ್ನು ನೋಡುತ್ತಾರೆ, ಆದರೆ ಅದೇ ಆ ಹೆಣ್ಣಿಗೆ ಒಳ್ಳೆಯ ಗಂಡನ್ನು ಆಯ್ಕೆ ಮಾಡುವ ಅವಕಾಶವೇ ಇಲ್ಲ. ನಮಗೂ ಆಸೆ ಇರುವುದಿಲ್ಲವಾ? ಇಡೀ ಹೆಣ್ಣುಕುಲಕ್ಕೆ ಕಳಂಕವಾಗಿರುವ ಈ ಸಂಪ್ರದಾಯಕ್ಕೆ ಧಿಕ್ಕಾರ, ಇನ್ನು ನಾನು ಬದುಕಿರಲಾರೆ ಎಂದು ಡೆತ್‌ನೋಟ್‌ನಲ್ಲಿ ಸುಮನ್ ಬರೆದಿದ್ದಾಳೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.