-->

ಅಶ್ಲೀಲ ವೀಡಿಯೊ ವೀಕ್ಷಕರ ಮೇಲೆ ಸಿಐಡಿ ಸೈಬರ್ ಅಪರಾಧ ವಿಭಾಗದ ಅಧಿಕಾರಿಗಳು ಹದ್ದಿನ ಕಣ್ಣು!

ಅಶ್ಲೀಲ ವೀಡಿಯೊ ವೀಕ್ಷಕರ ಮೇಲೆ ಸಿಐಡಿ ಸೈಬರ್ ಅಪರಾಧ ವಿಭಾಗದ ಅಧಿಕಾರಿಗಳು ಹದ್ದಿನ ಕಣ್ಣು!

ಬೆಂಗಳೂರು: ಲಾಕ್ ಡೌನ್ ಸಮಯದಲ್ಲಿ ಅಶ್ಲೀಲ ವೀಡಿಯೊ ನೋಡುವವರ‌ ಸಂಖ್ಯೆ ಅಧಿಕವಾಗಿದ್ದು, ಈ ಬಗ್ಗೆ ಸಿಐಡಿ ಸೈಬರ್ ಅಪರಾಧ ವಿಭಾಗದ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ. ವಿಶೇಷವಾಗಿ ಮಕ್ಕಳ‌ ಪೋರ್ನ್ (ಆಶ್ಲೀಲ) ವೀಡಿಯೊ ವೀಕ್ಷಣೆ ಲಾಕ್ ಡೌನ್ ವೇಳೆ ಹೆಚ್ಚಾಗಿದೆ. ಕಳೆದ ಒಂದು ವರ್ಷದಲ್ಲಿ ಮಕ್ಕಳು ಹಾಗೂ‌ ಹದಿಹರೆಯದ ವಯಸ್ಸಿನವರೇ ಹೆಚ್ಚಿನ ಸಂಖ್ಯೆಯಲ್ಲಿ ಅಶ್ಲೀಲ ವೀಡಿಯೋ ನೋಡಿರುವುದನ್ನು ಸಿಐಡಿಯ ಸೈಬರ್ ಪೊಲೀಸರು ಪತ್ತೆಹಚ್ಚಿದ್ದಾರೆ.

ಲಾಕ್ ಡೌನ್ ವೇಳೆ ಮಕ್ಕಳು, ಯುವರು, ದೊಡ್ಡವರು ಎಲ್ಲರೂ ಅಶ್ಲೀಲ ವೀಡಿಯೊ ನೋಡಿದ್ದಾರೆ.‌‌ ಕಳೆದ ತಿಂಗಳಲ್ಲಿ ಪೋರ್ನ್ ವೀಡಿಯೋ ವೀಕ್ಷಣೆ ಮಾಡಿದ್ದವರನ್ನು ಸಿಐಡಿ ಪತ್ತೆ ಹಚ್ಚಿದೆ. ರಾಜ್ಯಾದ್ಯಂತ ಸುಮಾರು 200 ಜನರನ್ನು ಈಗಾಗಲೇ ವಿಚಾರಣೆ ಮಾಡಲು ಮಾಡಲು ಸಿಐಡಿ ಮುಂದಾಗಿದೆ. ಬೆಂಗಳೂರಿನಲ್ಲಿಯೇ  60ಕ್ಕೂ ಹೆಚ್ಚು ಜನರನ್ನು ವಿಚಾರಣೆ ಈಗಾಗಲೇ ನಡೆಸಿದ್ದಾರೆ. ಯಾವ ಮೊಬೈಲ್ ಸಂಖ್ಯೆಯಿಂದ ವೀಡಿಯೊ ನೋಡಿದ್ದಾರೊ ಆ ಮೊಬೈಲ್ ಮಾಲಕ ಬಂಧನವಾಗುವ ಸಾಧ್ಯತೆಯಿದೆ. 18 ವರ್ಷದ ಒಳಗಿನ ಮಕ್ಕಳು ವೀಡಿಯೊ ನೋಡಿದ್ದರೆ ಪೋಷಕರಿಗೆ ಸಂಕಷ್ಟ ಎದುರಾಗಲಿದೆ.

ಆಶ್ಲೀಲ ವೀಡಿಯೋ ನೋಡುವುದನ್ನು ನಿಯಂತ್ರಿಸಲು ಹಾಗೂ ಅವರ ಗುರುತು ಪತ್ತೆ ಮಾಡುವುದಕ್ಕೆ ಸೈಬರ್ ಅಧಿಕಾರಿಗಳ ತಾಂತ್ರಿಕ ತಂಡ  ಸಿದ್ದವಾಗಿದೆ. ಅಶ್ಲೀಲ ವೀಡಿಯೋ ನೋಡೋರನ್ನೇ ಟಾರ್ಗೆಟ್ ಮಾಡಲಿದೆ‌ ಈ ತಂಡ. ಅಶ್ಲೀಲ ವಿಡಿಯೋ ವೀಕ್ಷಣೆ ಮಾಡಿರುವುದು ಸಾಬೀತಾದಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆಯ 67b ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಬಹುದಾಗಿದೆ. ಮಕ್ಕಳ ಚಿತ್ರ ಮತ್ತು ವೀಡಿಯೊ ಪ್ರಕರಣಕ್ಕೆ 5  ವರ್ಷ ಶಿಕ್ಷೆ 10 ಲಕ್ಷ ದಂಡ, ಎರಡನೇ ಬಾರಿ ಕೃತ್ಯ ಎಸಗಿದರೆ 7 ವರ್ಷ ಜೈಲು 10 ಲಕ್ಷ ದಂಡ ವಿಧಿಸಿದೆ. ಹಿರಿಯರ ಅಶ್ಲೀಲ ವಿಡಿಯೋ ನೋಡಿದರೆ 3 ವರ್ಷ ಜೈಲು 10‌ ಲಕ್ಷ ದಂಡ ಹಾಗೂ ಎರಡನೇ ಬಾರಿಯ ಕೃತ್ಯಕ್ಕೆ 7 ವರ್ಷ ಜೈಲು 10 ಲಕ್ಷ ದಂಡ ಕಟ್ಟಬೇಕಿದೆ. 

ಸೈಬರ್ ಇಂಟೆಲಿಜೆನ್ಸ್ ಹಾಗೂ ಕೇಂದ್ರ ಸರ್ಕಾರದ NCRB(ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯೂರೋ) ಮೂಲಕ‌ ಮಾಹಿತಿ ಕಲೆ ಹಾಕುತ್ತಿರುವ ಸಿಐಡಿ ಮನೆಯಲ್ಲಿ ಪ್ರಬುದ್ಧ ಮಕ್ಕಳು, ಯುವಕರು ಆಶ್ಲೀಲ ಚಿತ್ರವೀಕ್ಷಣೆ ನಡೆಸಿದರೆ, ಪೋಷಕರಿಗೆ ಬಂಧನ ಭೀತಿ ಎದುರಾಗಿದೆ.  ಸಿಮ್ ಪೋಷಕರ ಹೆಸರಿನಲ್ಲಿದ್ದು ಪೋಷಕರಿಗೆ ಗೊತ್ತಿಲ್ಲದೆ ಅವರ ಮೊಬೈಲ್ ನಲ್ಲಿ ಮಕ್ಕಳು ಪೋರ್ನ್ ನೋಡಿದ್ದರೆ  ತಂದೆ ತಾಯಂದಿರಿಗೆ ತಲೆದಂಡವಾಗಲಿದೆ ಎಂದು ಸೈಬರ್ ತಜ್ಞ ಪಣೀಂದರ್ ಎಚ್ಚರಿಸಿದ್ದಾರೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99