ದೇವಸ್ಥಾನದಲ್ಲಿ ಮಹಿಳೆಯರು ಸ್ನಾನ ಮಾಡುವಾಗ ವಿಡಿಯೋ ಚಿತ್ರೀಕರಿಸಿದ ಅಪ್ರಾಪ್ತ ಬಾಲಕ... ಮುಂದೆ ಏನಾಯ್ತು ಗೊತ್ತಾ..??
Friday, July 2, 2021
ವಿಜಯವಾಡ: ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಯಲ್ಲಿ ದೇವಸ್ಥಾನಕ್ಕೆ ಆಗಮಿಸಿದ ಮಹಿಳೆಯರು ಸ್ನಾನ ಮಾಡುವುದನ್ನು ಗೊತ್ತಿಲ್ಲದಂತೆ ಫೋಟೋ ಮತ್ತು ವಿಡಿಯೋ ಚಿತ್ರೀಕರಿಸಿ ಹಣಕ್ಕಾಗಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಅಪ್ರಾಪ್ತ ಬಾಲಕ, ಹೆಡ್ ಕಾನ್ಸ್ಟೇಬಲ್ ಮತ್ತು ಸಮುದಾಯವೊಂದರ ನಾಯಕನನ್ನು ಪೊಲೀಸರು ಬಂಧಿಸಿದ್ದಾರೆ.
ಪೆದ್ದಪುರಂ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಕನಕರಾವ್, ದೇವಸ್ಥಾನದ ಪುರೋಹಿತ ಸಂಬಂಧಿ ಅಪ್ರಾಪ್ತನ ಬಾಲಕನಿಗೆ ಹಣದ ಆಮಿಷವೊಡ್ಡಿ, ಮಹಿಳೆಯರು ಸ್ನಾನ ಮಾಡುವುದನ್ನು ಫೋಟೋ ಮತ್ತು ವಿಡಿಯೋ ಮಾಡಿ ವಾಟ್ಸ್ಆ್ಯಪ್ ಮೂಲಕ ಕಳುಹಿಸಿಕೊಡಲು ಹೇಳಿದ್ದ. ಬಾಲಕ ಫೋಟೋ ಮತ್ತು ವಿಡಿಯೋ ರೆಕಾರ್ಟ್ ಮಾಡಿ ಕಳುಹಿಸುತ್ತಿದ್ದ. ಬಳಿಕ ಕನಕರಾವ್ ಅವುಗಳನ್ನು ಪೆದ್ದಪುರಂನ ಸಮುದಾಯದ ನಾಯಕ ರೊಕ್ಕಮ್ ಶ್ಯಾಮ್ ದಯಾಕರ್ಗೆ ಕಳೆಹಿಸುತ್ತಿದ್ದ. ಬಳಿಕ ಇಬ್ಬರು ಸೇರಿ ದೇವಸ್ಥಾನ ಆಡಳಿತ ಮಂಡಳಿಯ ಕುಟುಂಬಕ್ಕೆ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದರು. 5 ಲಕ್ಷ ರೂಪಾಯಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಹಣ ಕೊಡದಿದ್ದರೆ, ಫೋಟೋ ಮತ್ತು ವಿಡಿಯೋಗಳನ್ನು ಬಿಡುಗಡೆ ಮಾಡಿ ದೇವಸ್ಥಾನದ ಗೌರವ ಹಾಳು ಮಾಡುವುದಾಗಿ ಹೆದರಿಸಿದ್ದರು.
ದೇವಸ್ಥಾನದ ಆಡಳಿತ ಮಂಡಳಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ ಬಳಿಕ ಹೆಡ್ ಕಾನ್ಸ್ಟೇಬಲ್ ಕನಕರಾವ್ ಮತ್ತು ರೊಕ್ಕ ಶ್ಯಾಮ್ ದಯಾಕರ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕನನ್ನು ಬಾಲಾಪರಾಧಿ ನ್ಯಾಯಮಂಡಳಿಗೆ ಹಸ್ತಾಂತರಿಸಲಾಗಿದೆ.