ಆಕಾಶದಲ್ಲೂ ಹಾರಡುತ್ತದೆ ಈ 'ಏರ್ ಕಾರು': ಗಂಟೆಗೆ ಎಷ್ಟು ಕಿ.ಮೀ. ಹಾರಡುತ್ತೇ ಗೊತ್ತಾ
Friday, July 2, 2021
ಸ್ಲೋವಾಕಿಯಾ: ತಂತ್ರಜ್ಞಾನದಲ್ಲಿ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಲೇ ಇರುತ್ತದೆ. ಇದೀಗ ಯುರೋಪಿಯನ್ ಕಂಪೆನಿಯೊಂದು ವಿನೂತನ ರೀತಿಯ ಕಾರನ್ನು ಆವಿಷ್ಕರಿಸಿದ್ದು, ಈ ಕಾರು ನೆಲದ ಮೇಲೆ ಸಂಚಾರಿಸುವುದರೊಂದಿಗೆ ಆಕಾಶದಲ್ಲಿ ಹಾರಾಡುತ್ತದೆ ಎಂದರೆ ನೀವು ನಂಬಲೇಬೇಕು.
ಯುರೋಪಿಯನ್ ಕ್ಲೇನ್ ವಿಷನ್ ಕಂಪೆನಿ ಈ ಕಾರನ್ನು ಆವಿಷ್ಕರಿಸಿದ್ದು, ಇದಕ್ಕೆ 'ಏರ್ ಕಾರ್' ಎಂದು ಹೆಸರಿಡಲಾಗಿದೆ. ಈ ಕಾರು ಪ್ರತಿ ಗಂಟೆಗೆ 170 ರಿಂದ 190 ಕಿ.ಮೀ. ವೇಗದಲ್ಲಿ ಸಂಚರಿಸುತ್ತದೆ. 2.15 ನಿಮಿಷದಲ್ಲಿ ಆಕಾಶಕ್ಕೆ ಹಾರಬಲ್ಲದು. ಕಾರು ಆಕಾಶಕ್ಕೆ ಹಾರುತ್ತಿದ್ದಂತೆ ವಿಮಾನವಾಗಿ ಬದಲಾಗಲು ಕೇವಲ ಎರಡು ನಿಮಿಷಗಳ ಕಾಲ ತೆಗೆದುಕೊಳ್ಳುತ್ತದೆ. ಇದು ಇಬ್ಬರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಕಳೆದ ಜೂನ್ 28ರಂದು ಸ್ಲೋವಾಕಿಯಾ ನಿತ್ರಾ ವಿಮಾನ ನಿಲ್ದಾಣದಿಂದ ಹಾರಾಟ ಆರಂಭಿಸಿ ಬ್ರಾಟಿಸ್ಲಾವಾ ವಿಮಾನ ನಿಲ್ದಾಣಕ್ಕೆ ಕೇವಲ 35 ನಿಮಿಷದಲ್ಲಿ ಬಂದು ತಲುಪಿದ್ದರು.
ಈ ಪ್ರಯೋಗ ಯಶಸ್ವಿಯಾಗಿದ್ದು, ಸದ್ಯದಲ್ಲೇ ಮಾರುಕಟ್ಟೆಗೆ ಲಗ್ಗೆ ಹಾಕಲು ಸಜ್ಜಾಗಿದೆ. 8,200 ಅಡಿ ಎತ್ತರ ಹಾಗೂ 1000 ಅಡಿ ಕಿ.ಮೀ. ದೂರ ಹಾರಾಡುವ ಸಾಮರ್ಥ್ಯ ಹೊಂದಿರುವ ಈ ಕಾರಿಗೆ BMWನ ಎಂಜಿನ್ ಬಳಕೆ ಮಾಡಲಾಗಿದೆ. ಸುಮಾರು 40 ಗಂಟೆಗಳ ಕಾಲ ನಿರಂತರವಾಗಿ ಹಾರಾಟ ಮಾಡುವ ಸಾಮರ್ಥ್ಯ ಇದಕ್ಕಿದೆ ಎಂದು ಎಂದು ಕಂಪನಿಯ ಸಿಇಒ ಹೇಳಿದ್ದಾರೆ.