-->
ಬಟ್ಟೆ ಒಗೆಯುತ್ತಿದ್ದಾಗ ನಡೆಯಿತು ದುರ್ಘಟನೆ- ಬಾಲಕಿಯನ್ನು ರಕ್ಷಿಸಲು ಹೋಗಿ ಐವರು ಮಹಿಳೆಯರು ಸಾವು...

ಬಟ್ಟೆ ಒಗೆಯುತ್ತಿದ್ದಾಗ ನಡೆಯಿತು ದುರ್ಘಟನೆ- ಬಾಲಕಿಯನ್ನು ರಕ್ಷಿಸಲು ಹೋಗಿ ಐವರು ಮಹಿಳೆಯರು ಸಾವು...

 ಚೆನ್ನೈ: ಬಾಲಕಿಯೊಬ್ಬಳು ನೀರಿನಲ್ಲಿ ಸಿಲುಕಿಕೊಂಡಾಗ ಆಕೆಯ ರಕ್ಷಣೆಗೆ ಹೋದ ಐವರು ನೀರುಪಾಲಾಗಿರುವ ದುರಂತ ಘಟನೆ ತಮಿಳುನಾಡಿನ ತಿರುವಳ್ಳೂರಿನಲ್ಲಿ  ನಡೆದಿದೆ. 

ಮೃತರನ್ನು ರಾಜು ಪತ್ನಿ ಸುಮತಿ (35), ಮಗಳು ಅಶ್ವಿತಾ (15) ದೇವೇಂದ್ರನ್​ ಮಗಳು ಜೀವಿತಾ (14) ಗುಣಶೇಖರನ್​ ಮಗಳು ನರ್ಮದಾ (12) ಮತ್ತು ಮುನಸ್ವಾಮಿ ಪತ್ನಿ ಜ್ಯೋತಿಲಕ್ಷ್ಮಿ (30) ಎಂದು ಗುರುತಿಸಲಾಗಿದೆ. ಇವೆರೆಲ್ಲರು ತಿರುವಳ್ಳೂರಿನ ಕರುಂಪುಕುಪ್ಪಮ್​ ಗ್ರಾಮದ ನಿವಾಸಿಗಳು. 

 ಜ್ಯೋತಿಲಕ್ಷ್ಮೀ ಮತ್ತು ಸುಮತಿ ಪುಷ್ಕರಣಿ ಕೆರೆಯ ದಡದಲ್ಲಿ ಬಟ್ಟೆ ಒಗೆಯುವಾಗ ನರ್ಮದಾ, ಅಶ್ವಿತಾ ಮತ್ತು ಜೀವಿತಾ ನೀರಿನಲ್ಲಿ ಆಟವಾಡುತ್ತಿದ್ದರು. ಈ ವೇಳೆ ನರ್ಮದಾ ಕೆರೆಯ ಆಳಕ್ಕೆ ಹೋಗಿ ಮಣ್ಣಿನಲ್ಲಿ ಸಿಲುಕಿದ್ದಾಳೆ. ಇದಾದ ನಂತರದಲ್ಲಿ ಆಕೆಯನ್ನು ಕಾಪಾಡಲು ಒಬ್ಬರ ಹಿಂದೆ ಒಬ್ಬರಂತೆ ಹೋಗಿ ನೀರಿನಲ್ಲಿ ಸಿಲುಕಿ ಮೃತಪಟ್ಟಿದ್ದಾರೆ. 

ಸಂಜೆಯಾದರೂ ಯಾರೊಬ್ಬರು ಮನೆಗೆ ಮರಳದಿದ್ದನ್ನು ನೋಡಿ ಅನುಮಾನಗೊಂಡ ಗ್ರಾಮಸ್ಥರು ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಬಳಿಕ ಮೃತದೇಹವನ್ನು ಪೊನ್ನೇರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಸ್ಥಳಾಂತರಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ

Ads on article

Advertise in articles 1

advertising articles 2

Advertise under the article