ಕೈಕೊಟ್ಟ ಪ್ರಿಯಕರ: ಮನೆ ಬಿಟ್ಟು ಮಠ ಸೇರಿದ ಬಿಗ್ ಬಾಸ್ ಸ್ಪರ್ಧಿ ಚೈತ್ರ ಕೊಟ್ಟುರ..!!
Thursday, July 22, 2021
ಬೆಂಗಳೂರು : ಬಿಗ್ ಬಾಸ್ 7 ನೇ ಸೀಸನ್ ಸ್ಪರ್ಧಿ ಚೈತ್ರಾ ಕೊಟ್ಟುರ ದಾಂಪತ್ಯ ಒಂದೇ ದಿನದಲ್ಲಿ ಮುರಿದು ಬಿದ್ದು ಇದರ ಪರಿಣಾಮ ಚೈತ್ರಾ ಇದೀಗ ಎಲ್ಲವನ್ನು ಬಿಟ್ಟು ಮಠ ಸೇರಿ ಆಧ್ಯಾತ್ಮಿಕತೆಯತ್ತ ವಾಲಿದ್ದಾರೆ
ಚೈತ್ರಾ ಅವರು ಇತ್ತೀಚಿಗೆ ಉದ್ಯಮಿ ನಾಗಾರ್ಜುನ್ ಎನ್ನುವರ ಜೊತೆ ಸರಳವಾಗಿ ವಿವಾಹವಾಗಿದ್ದರು. ಎರಡೂ ಕುಟುಂಬಗಳು ಒಪ್ಪದ ಕಾರಣ ಮರು ದಿನವೇ ಅದು ವಿವಾದವಾಗಿ ಕೋಲಾರದ ಮಹಿಳಾ ಠಾಣೆ ಮೆಟ್ಟಿಲೇರಿತ್ತು. ಕೊನೆಗೆ ಮದುವೆ ಮುರಿದು ಬಿತ್ತು.
ಬೆಳಗಾವಿಯಲ್ಲಿರುವ ಓಶೋ ಧ್ಯಾನ ಶಿಬಿರದಲ್ಲಿ ಚೈತ್ರಾ ಕೊಟ್ಟುರ ಪಾಲ್ಗೊಂಡಿದ್ದಾರೆ. ಚೈತ್ರಾ ಕೊಟ್ಟುರ ತಮ್ಮ ಹೆಸರನ್ನು ‘ಮಾ ಪ್ರಗ್ಯಾ ಭಾರತಿ’ ಎಂದು ಬದಲಾಯಿಸಿಕೊಂಡಿದ್ದಾರೆ. ಈ ವಿಚಾರವನ್ನು ಸ್ವತಃ ಚೈತ್ರಾ ಕೊಟ್ಟುರ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ”ಪ್ರೀತಿಯ ಗುರುಗಳಾದ ಸ್ವಾಮಿ ಗೋಪಾಲ ಭಾರತಿ ಅವರೊಂದಿಗೆ ಮಾ ಪ್ರಗ್ಯಾ ಭಾರತಿ.. ಓಶೋ ಧ್ಯಾನ ಶಿಬಿರ” ಎಂದು ಚೈತ್ರಾ ಕೊಟ್ಟುರ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.