ಕೇರಳ: 18 ಕೋಟಿ ರೂ ಔಷಧಿ ತಲುಪುವ ಮುನ್ನವೇ ಕೊನೆಯುಸಿರೆಳೆದ ಮಗು...
Thursday, July 22, 2021
ಕೊಝಿಕ್ಕೋಡ್: ಕೇರಳದ ಆರು ತಿಂಗಳ ಗಂಡು ಮಗು ಇಮ್ರಾನ್ ಎಂಬಾತ ಮಸ್ಕ್ಯುಲರ್ ಎಟ್ರೊಫಿ ಎಂಬ ಕಾಯಿಲೆಯಿಂದ ಬಳಲುತ್ತಿದ್ದು ಮಂಗಳವಾರ ಕೊನೆಯುಸಿರೆಳೆದಿದ್ದಾನೆ.
ಸುಮಾರು ಮೂರು ತಿಂಗಳಿನಿಂದ ಮಗುವಿಗೆ ಅಲ್ಲಿ ವೆಂಟಿಲೇಟರ್‍ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇಮ್ರಾನ್ ಹೆತ್ತವರಾದ ಆರಿಫ್ ಮತ್ತು ರಮೀಸಾ ತಸ್ನಿ ತಮ್ಮ ಪುಟ್ಟ ಮಗುವಿನ ಚಿಕಿತ್ಸೆಗಾಗಿ ಹಣ ಹೊಂದಿಸಲು ಬಹಳಷ್ಟು ಕಷ್ಟ ಪಟ್ಟಿದ್ದರು. ಆರಿಫ್ ಇತ್ತೀಚೆಗೆ ಕೇರಳ ಹೈಕೋರ್ಟ್‍ಗೆ ಮೊರೆ ಹೋಗಿ ಮಗುವಿಗೆ ಉಚಿತ ಚಿಕಿತ್ಸೆ ಕೊಡಿಸಲು ಮನವಿ ಮಾಡಿದ್ದರು.
ಸ್ಥಳೀಯ ಶಾಸಕರ ಮುತುವರ್ಜಿಯಿಂದ ಆರಂಭಿಸಲಾದ ಕ್ರೌಡ್ ಫಂಡಿಂಗ್‍ನಿಂದ ರೂ 16 ಕೋಟಿ ಸಂಗ್ರಹಿಸಲಾಗಿತ್ತು. ಆದರೆ ಉಳಿದ ಹಣ ಸಂಗ್ರಹಣೆ ಸದ್ಯವೇ ನಡೆಯಬಹುದು ಎನ್ನುವಷ್ಟರಲ್ಲಿ ಇಮ್ರಾನ್ ಕೊನೆಯುಸಿರೆಳೆದಿದ್ದಾನೆ.