ಈ ಮಹಿಳೆ ಕಾಲಿಂಗ್ ಬೆಲ್ ಗೆ ಬಾಗಿಲು ತೆಗೆದಾಗ ಕಾಣಿಸಿದ್ದು ಅಚ್ಚರಿ.....2 ತಿಂಗಳ ಹಸುಗೂಸು...
Monday, July 12, 2021
ಬೆಂಗಳೂರು: ಸೆಕ್ಯೂರಿಟಿಗಾರ್ಡ್ ಮನೆಯ ಕಾಲಿಂಗ್ ಬೆಲ್ ಮಾಡಿ 2 ತಿಂಗಳ ಹಸುಗೂಸನ್ನು ಬಾಗಿಲ ಮುಂದಿಟ್ಟು ಅಪರಿಚಿತರು ಪರಾರಿಯಾಗಿದ್ದಾರೆ.
ಮಲ್ಲತ್ತಹಳ್ಳಿ ನಿವಾಸಿ ಬೆಮ್ರೋ ಕಾಲೇಜೊಂದರಲ್ಲಿ ಸೆಕ್ಯೂರಿಟಿಗಾರ್ಡ್ ಆಗಿ ಕೆಲಸ ಮಾಡುತ್ತಿದ್ದು, ತನ್ನ ಪತ್ನಿ ಮಕ್ಕಳ ಜತೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಜು.8 ರಂದು ಮುಂಜಾನೆ 5.30ರಲ್ಲಿ ಮನೆಯ ಕಾಲಿಂಗ್ ಬೆಲ್ ಶಬ್ದವಾಗಿತ್ತು. ಪತ್ನಿ ಮುಕ್ತಾಬಾಯಿ ಬಾಗಿಲು ತೆರೆದಾಗ ಬಾಗಿಲ ಬಳಿ 2 ತಿಂಗಳ ಗಂಡು ಮಗು ಕಂಡು ಬಂದಿತ್ತು. ಕೂಡಲೇ ಅಕ್ಕ-ಪಕ್ಕದಲ್ಲಿ ಹುಡುಕಾಡಿದರೂ ಯಾರೂ ಕಾಣಿಸಲಿಲ್ಲ. ನಂತರ ಮುಕ್ತಾಬಾಯಿ ಈ ವಿಚಾರವನ್ನು ಮನೆ ಮಾಲೀಕರಿಗೆ ತಿಳಿಸಿದ್ದರು. ಮಾಲೀಕರ ಸಲಹೆ ಮೇರೆಗೆ ಪೊಲೀಸ್ ಸಹಾಯವಾಣಿ ನಂಬರ್‌ಗೆ ಕರೆ ಮಾಡಿ ಮಾಹಿತಿ ನೀಡಿದ್ದರು.
ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿ ಮಗುವನ್ನು ಆರೈಕೆಗಾಗಿ ವಾಣಿವಿಲಾಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಜ್ಞಾನಭಾರತಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.