ಆಕಸ್ಮಿಕವಾಗಿ ಪಾಳು ಬಾವಿಗೆ ಬಿದ್ದ 80 ವರ್ಷದ ವೃದ್ಧ, ಬದುಕಿ ಬಂದ ರೋಚಕ ಕತೆ ..
Saturday, July 3, 2021
ಸಿದ್ದಿಪೇಟೆ: 80 ವರ್ಷ ಹಿರಿಯ ಪ್ರಾಯದ ವ್ಯಕ್ತಿಯೊಬ್ಬರು ತೆಲಂಗಾಣದ ಸಿದ್ದಿಪೇಟೆ ಸಮೀಪದ ಗ್ರಾಮವೊಂದರಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಸಿದ್ದಿಪೇಟೆಗೆ ಹಿಂದಿರುಗುವಾಗ ದಾರಿತಪ್ಪಿದ ನಾರಾಯಣ ಜಮೀನಿನಲ್ಲಿದ್ದ ಪಾಳುಬಾವಿಗೆ ಆಕಸ್ಮಿಕವಾಗಿ ಬಿದ್ದು ಮೂರು ದಿನಗಳ ಬಳಿಕ ರಕ್ಷಣೆ ಒಳಗಾದ ಘಟನೆ ನಡೆದಿದೆ.
ನಾರಾಯಣ ಎಂಬುವವರು ಹಾಳು ಬಾವಿಗೆ ಬಿದ್ದ ಹಿರಿಯ ಜೀವ. ಮೂರು ದಿನಗಳ ಕಾಲವೂ ಊಟ ಇಲ್ಲದೆ ಹಿರಿಯ ಜೀವ ಸಾಕಷ್ಟು ನರಳಾಡಿದೆ. ಘಟನೆ ನಡೆದ ಮೂರು ದಿನಗಳ ಬಳಿಕ ಪಾಳು ಬಾವಿಯ ಹತ್ತಿರ ಕೆಲಸ ಮಾಡುತ್ತಿದ್ದ ರೈತನಿಗೆ ನಾರಾಯಣ ಅಳುವ ಶಬ್ದ ಕೇಳಿದೆ. ತಕ್ಷಣ ಹೋಗಿ ನೋಡಿದ ರೈತ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಿರಿಯ ಜೀವವನ್ನು ರಕ್ಷಿಸಿದ್ದಾರೆ.
ತುಂಬಾ ನಿತ್ರಾಣರಾಗಿದ್ದ ನಾರಾಯಣರ ನಡುವಿಗೆ ಹಗ್ಗ ಕಟ್ಟಿ ಮೇಲಕ್ಕೆ ಎಳೆಯಲಾಯಿತು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.