ಡಿವೋರ್ಸ್ ಘೋಷಿಸಿದ ನಟ ಅಮೀರ್ ಖಾನ್ - ಕಿರಣ್ ರಾವ್ ದಂಪತಿ: 15 ವರ್ಷದ ದಾಂಪತ್ಯ ಜೀವನಕ್ಕೆ ದಿ ಎಂಡ್
Saturday, July 3, 2021
ಮುಂಬೈ : 15 ವರ್ಷದ ದಾಂಪತ್ಯ ಜೀವನಕ್ಕೆ ಬಾಲಿವುಡ್ ನಟ ಅಮೀರ್ ಖಾನ್ ಹಾಗೂ ಕಿರಣ್ ರಾವ್ ದಂಪತಿಗಳು ಅಂತ್ಯವಾಡಿದ್ದಾರೆ.
ಅಮೀರ್ ಖಾನ್ ಹಾಗು ಕಿರಣ್ ರಾವ್ ಪರಸ್ಪರ ಸಮ್ಮತಿ ಮೂಲಕ ಇಂದು ( ಜುಲೈ 03) ವಿಚ್ಛೇಧನ ಘೋಷಿಸಿದ್ದಾರೆ. ತಮ್ಮ ಡಿವೋರ್ಸ್ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿರುವ ಈ ದಂಪತಿ, ಪರಸ್ಪರ ಒಪ್ಪಿಗೆ ಮೂಲಕವೇ ದೂರವಾಗಲು ನಿರ್ಧರಿಸಿದ್ದೇವೆ ಎಂದಿದ್ದಾರೆ.