-->

17 ವರ್ಷಗಳ ನಂತರ ಮತ್ತೆ ರಾಷ್ಟ್ರಕ್ಕೆ ಮರಳಿದೆ ಮಮಂಕಿಫಾಕ್ಸ್..!! ಇದೇನಿದು ಮತ್ತೊಂದು ಹೊಸ ವೈರಸ್..

17 ವರ್ಷಗಳ ನಂತರ ಮತ್ತೆ ರಾಷ್ಟ್ರಕ್ಕೆ ಮರಳಿದೆ ಮಮಂಕಿಫಾಕ್ಸ್..!! ಇದೇನಿದು ಮತ್ತೊಂದು ಹೊಸ ವೈರಸ್..

 ವಾಷಿಂಗ್ಟನ್:  17 ವರ್ಷಗಳ ನಂತರ ಮತ್ತೆ ಮಂಕಿಫಾಕ್ಸ್​ ರಾಷ್ಟ್ರಕ್ಕೆ ಮರಳಿದೆ. ಅಮೆರಿಕದ ಟೆಕ್ಸಾಸ್​ನಲ್ಲಿ ವ್ಯಕ್ತಿಯೊಬ್ಬನಲ್ಲಿ ಈ ಮಂಕಿಫಾಕ್ಸ್ ದೃಢವಾಗಿದೆ. 

ಆತ ಕೆಲವು ದಿನಗಳ ಹಿಂದೆ ನೈಜೀರಿಯಾದಿಂದ ದೇಶಕ್ಕೆ ಮರಳಿದ್ದಾಗಿ ಹೇಳಲಾಗಿದೆ.ಸೋಂಕನ್ನು ನಿಯಂತ್ರಿಸುವುದಕ್ಕಾಗಿ ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರವು (ಸಿಡಿಸಿ) ಆ ವ್ಯಕ್ತಿಯ ಸಂಪರ್ಕಕ್ಕೆ ಬಂದಿದ್ದವರಿಗಾಗಿ ಹುಡುಕಾಟ ಆರಂಭಿಸಿದೆ.

ಮಂಕಿಫಾಕ್ಸ್​ ಪ್ರಾಣಿಗಳಿಂದ ಮನುಷ್ಯನಿಗೆ ಹರಡುವ ಸೋಂಕಾಗಿದ್ದು, ಈ ಹಿಂದೆ 2003ರಲ್ಲಿ ಅಮೆರಿಕದಲ್ಲಿ ಮಂಕಿಫಾಕ್ಸ್ ಕಾಣಿಸಿಕೊಂಡಿತ್ತು. ಆಗ 47 ಮಂದಿಗೆ ಸೋಂಕು ದೃಢವಾಗಿತ್ತು. ಅದಾದ ನಂತರ ಸೋಂಕನ್ನು ಸಂಪೂರ್ಣವಾಗಿ ನಿಯಂತ್ರಿಸಲಾಗಿತ್ತು. ಮನುಷ್ಯನಲ್ಲಿ ಕಾಣುವ ಸಿಡುಬು ರೋಗ ಲಕ್ಷಣಗಳನ್ನೇ ಈ ಸೋಂಕು ಹೊಂದಿದೆ. ಆದರೆ ಸಿಡುಬಿನಷ್ಟು ಅಪಾಯಕಾರಿ ಅಲ್ಲ ಹಾಗೂ ಅದನ್ನು ಆದಷ್ಟು ಬೇಗ ನಿಯಂತ್ರಿಸಬಲ್ಲದು ಎಂದು ಹೇಳಲಾಗಿದೆ. 

ನೈಜೀರಿಯಾದಲ್ಲಿ 2017ರಲ್ಲಿ ಮಂಕಿಫಾಕ್ಸ್​ನ ಮೊದಲ ಪ್ರಕರಣ ಕಾಣಿಸಿಕೊಂಡಿದ್ದು, ಅದರ ನಂತರ ಅಲ್ಲಲ್ಲಿ ಈಸೋಂಕು ಕಾಣಿಸಿಕೊಳ್ಳುತ್ತಲೇ ಇದೆ. 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99