ಉಡುಪಿ- ಐದು ತಿಂಗಳ ಮಗು ಸಾವು- ಈ ಮಗುವಿಗೆ ಬೇಕಿತ್ತು 16 ಕೋಟಿ ಇಂಜೆಕ್ಷನ್
Friday, July 30, 2021
ಉಡುಪಿ: ಬೆನ್ನು ಮೂಳೆಯ ಸ್ನಾಯು ಕ್ಷೀಣತೆ ಎಂಬ ಕಾಯಿಲೆಗೆ ತುತ್ತಾಗಿದ್ದ ಉಡುಪಿಯ ಐದು ತಿಂಗಳ ಮಗು ಇಂದು ಕೊನೆಯುಸಿರೆಳೆದಿದೆ.
ಕಾರ್ಕಳ ತಾಲೂಕು ಬೆಳ್ಮಣ್‌ನ ಸಂದೀಪ್ ಹಾಗೂ ರಂಜಿತಾ ದಂಪತಿಗೆ ಐದು ತಿಂಗಳ ಮಿಥಾನ್ಶ್ ದೇವಾಡಿಗ ಎಂಬ ಮಗು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ. ಉಡುಪಿಯ ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದ್ದ ವೈದ್ಯರು ಇದೊಂದು ಅಪರೂಪದ ಕಾಯಿಲೆ, ಬೇರೆ ಕಡೆ ಕರೆದುಕೊಂಡು ಹೋಗಿ ಎಂದು ಹೇಳಿದ್ದರು. ನಂತರ ಮಗುವಿನ ಪೋಷಕರು ಮುಂಬೈನ ಹಿಂದೂಜಾ ಆಸ್ಪತ್ರೆಗೆ ಕರೆದು ಕೊಂಡು ಹೋಗಿ ತಜ್ಞ ವೈದ್ಯರಿಗೆ ಮಗುವನ್ನು ತೋರಿಸಿದಾಗ ಹಾರ್ಮೋನ್ ವ್ಯತ್ಯಾಸದಿಂದ ಉಂಟಾಗುವ ಬೆನ್ನು ಮೂಳೆಯ ಸ್ನಾಯು ಕ್ಷೀಣತೆ ಎಂಬ ಅಪೂಪದ ಕಾಯಿಲೆ ಎಂದು ಗೊತ್ತಾಗಿದೆ. ಮಿಥಾನ್ಶ್ ಎಲ್ಲರಂತೆ ಆರೋಗ್ಯವಾಗಿರಲು ಹೊರದೇಶದಿಂದ 16 ಕೋಟಿಯ ಇಂಜೆಕ್ಷನ್ ತರಿಸಬೇಕು ಅಂತ ವೈದ್ಯರು ಹೇಳಿದ್ದರು. ಪೋಷಕರು ಕಂದನನ್ನು ಉಳಿಸಲು ಕ್ರೌಡ್ ಪಂಡಿಂಗ್ ಮೊರೆ ಹೋಗಿ ಹಣ ಹೊಂದಿಸಲು ಪ್ರಯತ್ನ ನಡೆಸಿದ್ದರು. ಆದರೆ ಮಿಥಾನ್ಶ್ ದೇವಾಡಿಗ ಇಂದು ಕೊನೆಯುಸಿರೆಳೆದಿದ್ದಾನೆ.