ಇದು ಜಗತ್ತಿನ ಅತ್ಯಂತ ದುಬಾರಿ ಫ್ರೆಂಚ್ ಫ್ರೈಸ್...ಒಂದು ಪ್ಲೇಟಿಗೆ 15 ಸಾವಿರ ರೂಪಾಯಿ..!!
Thursday, July 29, 2021
ನ್ಯೂಯಾರ್ಕ್ : ಅಮೇರಿಕಾದ ಮ್ಯಾನಹಟ್ಟನ್ನಲ್ಲಿರುವ ‘ಸೆರೆಂಡಿಪಿಟಿ 3’ ರೆಸ್ಟೊರೆಂಟಲ್ಲಿ ಒಂದು ಪ್ಲೇಟಿಗೆ ಸುಮಾರು 15 ಸಾವಿರ ರೂಪಾಯಿ ಬೆಲೆಯುಳ್ಳ ಆಲೂಗೆಡ್ಡೆ ಫ್ರೈಸ್ ಸಿಗುತ್ತಿದೆ.
ಈ ರೆಸ್ಟೊರೆಂಟ್, ಅದಾಗಲೇ ಜಗತ್ತಿನ 295 ಡಾಲರ್ನ ಅತಿ ದುಬಾರಿ ಬರ್ಗರ್ ಮತ್ತು ಅತಿ ದುಬಾರಿ ಐಸ್ಕ್ರೀಂ ಸಂಡೇ(1000 ಡಾಲರ್)ಗಳನ್ನು ಮಾರುವ ತಾಣವಾಗಿದೆ. ಇದೀಗ ಈ ದುಬಾರಿ ತಿನಿಸುಗಳ ಪಟ್ಟಿಗೆ ತನ್ನ ದುಬಾರಿ ಫ್ರೈಸ್ಅನ್ನೂ ಸೇರಿಸಿದೆ.
ಸಂಸ್ಥೆ ಚಿಪ್ಪರ್ಬೆಕ್ ಆಲೂಗೆಡ್ಡೆಯಿಂದ ಮಾಡಿದ ‘ಕ್ರೀಮ್ ಡೆ ಲಾ ಕ್ರೀಮ್ ಪೊಮ್ಮೆಸ್ ಫ್ರೈಟ್ಸ್’ ಎಂಬ ಹೆಸರಿನ ಈ ಫ್ರೆಂಚ್ ಫ್ರೈಸ್ ಮಾದರಿಯ ಡಿಶ್ಅನ್ನು ಗೂಸ್ ಫ್ಯಾಟ್ನಲ್ಲೇ ಕರಿಯುತ್ತಾರಂತೆ. ಗಿನ್ನೀಸ್ ವರ್ಲ್ಡ್ ರೆಕಾರ್ಡ್ಸ್ನವರೇ ದೃಢೀಕರಿಸಿರುವಂತೆ ಭೂಮಿಯ ಮೇಲೆ ಸಿಗುವ ಅತ್ಯಂತ ದುಬಾರಿ ಫ್ರೈಸ್ ಇದಾಗಿದೆ.