-->

ಅಗ್ಗದ ಪ್ಲಾನ್ ಕಿತ್ತುಹಾಕಿ ಗ್ರಾಹಕರಿಗೆ ಶಾಕ್ ಕೊಟ್ಟ ಏರ್ಟೆಲ್..!!

ಅಗ್ಗದ ಪ್ಲಾನ್ ಕಿತ್ತುಹಾಕಿ ಗ್ರಾಹಕರಿಗೆ ಶಾಕ್ ಕೊಟ್ಟ ಏರ್ಟೆಲ್..!!

 

ನವದೆಹಲಿ:  ಏರ್​ಟೆಲ್ ಸಂಸ್ಥೆಯು ಈವರೆಗೆ ಇದ್ದ 49 ರೂಪಾಯಿಯ ಮಾಸಿಕ ರಿಚಾರ್ಜ್ ಪ್ಲಾನ್ ಅನ್ನು ತೆಗೆದುಹಾಕಿದೆ.

ಇನ್ನು ಮುಂದೆ ಏರ್​ಟೆಲ್ ಗ್ರಾಹಕರು 49 ರೂಪಾಯಿ ಮಾಸಿಕ ರಿಚಾರ್ಜ್ ಮಾಡುವ ಅವಕಾಶವಿರುವುದಿಲ್ಲ. ಪ್ರಿ ಪೇಯ್ಡ್ ಸಿಮ್ ಬಳಸುವವರಿಗೆ ಆರಂಭಿಕ ಯೋಜನೆಯೇ 79 ರೂಪಾಯಿಯಿಂದ ಆರಂಭವಾಗಲಿದೆ. 

79 ರೂಪಾಯಿ ರಿಚಾರ್ಜ್ ಮಾಡಿದರೆ, 28 ದಿನಗಳಿಗೆ 64 ರೂಪಾಯಿ ಟಾಕ್​ಟೈಮ್ ಹಾಗೂ 200 ಎಂಬಿ ಡೇಟಾ ಕೊಡಲಾಗುವುದು. ಈ ಹಿಂದಿನ 49 ರೂಪಾಯಿ ರಿಚಾರ್ಜ್​ನಲ್ಲಿ 38 ರೂಪಾಯಿ ಟಾಕ್​ಟೈಮ್ ಹಾಗೂ 100 ಎಂಬಿ ಡೇಟಾ ಸಿಗುತ್ತಿತ್ತು. ಗ್ರಾಹಕರು ಹೆಚ್ಚು ಸಮಯ ಮಾತನಾಡುವ ಅವಕಾಶ ಸಿಗಲಿ ಎಂದು 49 ರೂಪಾಯಿ ಯೋಜನೆ ಬದಲು 79 ರೂಪಾಯಿ ಯೋಜನೆ ಜಾರಿಗೆ ತಂದಿರುವುದಾಗಿ ಸಂಸ್ಥೆ ಹೇಳಿಕೊಂಡಿದೆ. ಈ ಯೋಜನೆಯು ಇದೇ ತಿಂಗಳು 29ರಿಂದಲೇ ಜಾರಿಯಲ್ಲಿದೆ. 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99