ಅಕ್ಕನ ಮೇಲೆ ರೇಪ್ ಮಾಡಿ, ಗರ್ಭಿಣಿಯಾಗಿಸಿದ 12 ವರ್ಷದ ಬಾಲಕ!
Friday, July 9, 2021
ನೋಯ್ಡಾ: 16 ವರ್ಷದ ಸಹೋದರಿಯ ಮೇಲೆ 12 ವರ್ಷದ ಬಾಲಕ ಅತ್ಯಾಚಾರ ಎಸಗಿದ್ದು, ಪರಿಣಾಮ ಆಕೆ ಗರ್ಭಿಣಿಯಾಗಿದ್ದಾಳೆ. ಈ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಸಂಭವಿಸಿದೆ.
ಪಾಲಕರು ಕೆಲಸಕ್ಕೆ ಹೋದಾಗ ಬಾಲಕ ತನ್ನ ಅಕ್ಕನ ಮೇಲೆ ಎರಡು ಬಾರಿ ಅತ್ಯಾಚಾರ ಮಾಡಿದ್ದಾನೆ. ಕೆಲವು ತಿಂಗಳಿಂದ ಸಂತ್ರಸ್ತೆಯ ದೇಹದಲ್ಲಿನ ಬದಲಾವಣೆಯನ್ನು ಗಮನಿಸಿ ಆಕೆಯನ್ನು ಪ್ರಶ್ನಿಸಿದಾಗ ನಡೆದ ಎಲ್ಲ ಘಟನೆಯನ್ನು ಆಕೆ ತಾಯಿ ಮುಂದೆ ವಿವರಿಸಿದ್ದಾಳೆ. ಕಿರಿಯ ಸಹೋದರ ಎರಡು ಬಾರಿ ಆಕೆ ಮೇಲೆ ಬಲತ್ಕಾರ ಮಾಡಿದ್ದಾಗಿ ತಾಯಿಯ ಮುಂದೆ ಸಹೋದರಿ ಹೇಳಿಕೊಂಡಿದ್ದಾಳೆ.
ವೈದ್ಯಕೀಯ ಪರೀಕ್ಷೆಯಲ್ಲೂ ಹುಡುಗಿ ಗರ್ಭಿಣಿಯಾಗಿರುವುದು ದೃಢವಾಗಿದೆ. ಬಾಲಕನನ್ನು ಬಾಲಾಪರಾಧಿ ಮಂಡಳಿ ವಶಕ್ಕೆ ಪಡೆದಿದ್ದು, ಆತನ ವಿರುದ್ಧ ಪೊಕ್ಸೊ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.