
ಹುಡುಗಿ ಫಿಕ್ಸ್ ಆದ್ರೂ ಮದುವೆ ವಿಳಂಬ ಯಾಕೆ ಎಂದು ಟವರ್ ಏರಿ ಕುಳಿತ ಯುವಕ (video)
ವಿಜಯನಗರ: ಹುಡುಗಿ ಫಿಕ್ಸ್ ಆದ್ರೂ ಮದುವೆ ವಿಳಂಬವಾಗುತ್ತಿದೆ ಎಂಬ ಕಾರಣಕ್ಕೆ ಯುವಕನೊಬ್ಬ ಬೇಗ ಮದುವೆ ಮಾಡಿ ಅಂತ ಟವರ್ ಕಂಬವೇರಿ ಕುಳಿತಿರುವ ಘಟನೆ ಹೊಸಪೇಟೆ ತಾಲೂಕಿನ ಮರಿಯಮ್ಮನ ಹಳ್ಳಿಯಲ್ಲಿ ನಡೆದಿದೆ.
ಚಿರಂಜೀವಿ (23) ಎಂಬ ಯುವಕನಿಗೆ ಹುಡುಗಿ ಫಿಕ್ಸ್ ಆಗಿದ್ದು, ಮದುವೆಗೆ ವಿಳಂಬ ಆಗುತ್ತಿದೆ ಎನ್ನುವ ಕಾರಣದಿಂದ ಪ್ರತಿಭಟನೆ ರೂಪದಲ್ಲಿ ಟವರ್ ಏರಿದ್ದಾನೆ. ಜಿರಂಜೀವಿಯ ಪಾಲಕರಿಗೆ ಇಬ್ಬರು ಗಂಡು ಮಕ್ಕಳು, ಈತ ಚಿಕ್ಕವನು. ದೊಡ್ಡ ಹುಡುಗನಿಗೆ ಮದುವೆಯಿನ್ನೂ ಆಗಲಿಲ್ಲ. ಆದ್ದರಿಂದ ಮೊದಲು ಅವನಿಗೆ ಮಾಡಿ ನಂತರ ಈತನಿಗೆ ಮಾಡುವ ಸಲುವಾಗಿ ಮದುವೆ ವಿಳಂಬ ಮಾಡುತ್ತಿದ್ದಾರೆ. ಇದರಿಂದ ಚಿರಂಜೀವಿ ಮದುವೆಗೆಂದು ಹುಡುಗಿ ಫಿಕ್ಸ್ ಮಾಡಿ ಮಾತುಕತೆ ನಡೆದಿದ್ದರೂ ಅಣ್ಣನಿಗಾಗಿ ಕಾಯುತ್ತಿರುವುದು ಸರಿಯಲ್ಲ ಎಂದು ಈ ರೀತಿ ಮಾಡಿದ್ದಾನೆ.
ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದು ಪೊಲೀಸರು ಮತ್ತು ಸ್ಥಳೀಯರು ಸೇರಿ ಆತನನ್ನು ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ.