-->

ಈ ದೇಶದಲ್ಲಿ ಮಹಿಳೆಯರು ಟ್ಯಾಕ್ಸಿಯಲ್ಲಿ ಸಂಚರಿಸಿ ಹಣದ ಬದಲು ಸೆಕ್ಸ್ ಮಾಡಿದರೆ ಲೆಕ್ಕ ಚುಕ್ತಾ!

ಈ ದೇಶದಲ್ಲಿ ಮಹಿಳೆಯರು ಟ್ಯಾಕ್ಸಿಯಲ್ಲಿ ಸಂಚರಿಸಿ ಹಣದ ಬದಲು ಸೆಕ್ಸ್ ಮಾಡಿದರೆ ಲೆಕ್ಕ ಚುಕ್ತಾ!


ಕಂಪಾಲಾ: ಟ್ಯಾಕ್ಸಿಗಳಲ್ಲಿ ಸಂಚಾರಮಾಡಿ ಚಾಲಕನಿಗೆ ಕೊಡಲು ಹಣವಿಲ್ಲವೆಂದರೆ ಅದಕ್ಕಿಂತ ಸಂಕಷ್ಟ ಇನ್ನೊಂದಿಲ್ಲ. ಆದರೆ ಈ ದೇಶದಲ್ಲಿ ಮಹಿಳೆಯರಿಗೆ ಈ ಬಗ್ಗೆ ಚಿಂತೆಯೇ ಇಲ್ಲ. ಯಾಕೆಂದರೆ ಟ್ಯಾಕ್ಸಿಯಲ್ಲಿ ರೈಡ್ ಮಾಡಿ ಹಣವಿಲ್ಲ ಎಂದರೆ ಟ್ಯಾಕ್ಸಿ ಡ್ರೈವರ್ ಜತೆಯೇ ಸೆಕ್ಸ್ ಮಾಡಿದರೆ ಸಾಕು ಅಲ್ಲಿಗೆ ಲೆಕ್ಕ ಚುಕ್ತಾ. 

ಈ ರೀತಿಯ ವ್ಯವಸ್ಥೆ ಇರೋದು ಉಗಾಂಡದಲ್ಲಿ. ಇಲ್ಲಿ ಟ್ಯಾಕ್ಸಿ ಡ್ರೈವರ್​ ಕೆಲಸ ಮಾಡುವವರು ಬಹುತೇಕ ಯುವಕರೇ. ಅದಲ್ಲದೇ ಈ ಕೆಲಸದಲ್ಲಿ ಲೈಂಗಿಕ ಕ್ರಿಯೆ ಅತ್ಯಂತ ಸಾಮಾನ್ಯ ವಿಚಾರವಂತೆ. ಹಣ ಇಲ್ಲದ ಮಹಿಳೆಯರು ಯಾವುದೇ ಸಂಕೋಚ ಇಲ್ಲದೆ ಲೈಂಗಿಕ ಕ್ರಿಯೆ​ಯನ್ನೇ ಆಯ್ಕೆ ಮಾಡಿಕೊಳ್ಳುತ್ತಾರಂತೆ. ಅಲ್ಲದೆ ಅದೆಷ್ಟೋ ಮಹಿಳೆಯರು ಹಣ ಇದ್ದರೂ ಸೆಕ್ಸ್ ಆಫರ್​ ಅನ್ನೇ ಕೊಟ್ಟು ದುಡ್ಡು ಉಳಿಸುತ್ತಾರಂತೆ.

ಸುರಕ್ಷತೆ ಇಲ್ಲದೆಯೇ ಸಾಕಷ್ಟು ಬಾರಿ ಲೈಂಗಿಕ ಕ್ರಿಯೆ​ಯಲ್ಲಿ​ ತೊಡಗಿರುವುದಾಗಿ ಇಲ್ಲಿನ ಬಹುತೇಕ ಚಾಲಕರು ಒಪ್ಪಿಕೊಳ್ಳುತ್ತಾರೆ. ಉಗಾಂಡ ದೇಶದಲ್ಲಿನ ಶೇ.12 ಡ್ರೈವರ್​ಗಳು ಈ ರೀತಿ ಪ್ರಯಾಣಿಕರೊಂದಿಗೆ ಸೆಕ್ಸ್​ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಶೇ. 65.7 ಡ್ರೈವರ್​ಗಳು ತಮ್ಮ ಪತ್ನಿಯಲ್ಲದೆ ಬೇರೆಯವರೊಂದಿಗೂ ಕಳೆದ 12 ತಿಂಗಳುಗಳಲ್ಲಿ ಸೆಕ್ಸ್​ ಮಾಡಿದ್ದಾಗಿ ತಿಳಿಸಿದ್ದಾರೆ. ಶೇ. 23 ಡ್ರೈವರ್​ಗಳು ಒಂದಕ್ಕಿಂತ ಹೆಚ್ಚು ಲವರ್​ ಇರುವುದಾಗಿಯೂ ಹೇಳಿಕೊಂಡಿದ್ದಾರೆ. ಹಾಗೆಯೇ ಇವರೆಲ್ಲರಲ್ಲಿ ಶೇ. 57.1 ಡ್ರೈವರ್​ಗಳು ತಾವು ಕಾಂಡೋಮ್ ಬಳಕೆ ಮಾಡಿಲ್ಲದೆಯೇ ಬೇರೆ ಮಹಿಳೆಯರೊಂದಿಗೆ ಲೈಂಗಿಕ ಸಂಪರ್ಕ ಮಾಡಿದ್ದೇವೆ ಎಂದು ಹೇಳಿದ್ದಾರೆ. 

ದೇಶದಲ್ಲಿ ಈಗಾಗಲೇ ಶೇ.5.6 ಮಂದಿಗೆ ಏಡ್ಸ್​ ಕಾಯಿಲೆಯಿದೆ. ಇಲ್ಲಿನ ಡ್ರೈವರ್ ಗಳು ಇದೇ ರೀತಿ ಸುರಕ್ಷತೆಯನ್ನು ಮರೆತರೆ ಏಡ್ಸ್​ನಿಂದ ಬಳಲುವವರ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ. ಏಡ್ಸ್​ ನಿಯಂತ್ರಣಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಉಗಾಂಡಾದ ಏಡ್ಸ್ ಆಯೋಗದ ಮುಖ್ಯಸ್ಥ ಡೇನಿಯಲ್ ಬೈಬಕಾಮಾ ಅವರು ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99