ನವ ವಧುವಿಗೆ ನದಿನೀರಿಗೆ ಇಳಿಯಲು ಹಿಂಜರಿತ- ಪತಿ ಮಾಡಿದ ಮರೆಯಲಾರದ ಕಾರ್ಯ... ಏನದು?
Tuesday, June 29, 2021
ಕಿಶನ್ಗಂಜ್( ಬಿಹಾರ) :ಪತ್ನಿ ನೀರಿಗಿಳಿಯಲು ಅಂಜಿದ್ದು, ತನ್ನ ಪತಿಯ ಬಳಿ ಹೇಳಿದಾಗ ಆತ ಆಕೆಯನ್ನು ನೀರಿಗಿಳಿಯಲು ಬಿಡದೆ ತನ್ನ ಹೆಗಲ ಮೇಲೆ ಹೊತ್ತುಕೊಂಡು ನದಿ ದಾಟಿಸಿದ್ದಾನೆ.
ಹೊಸದಾಗಿ ಮದುವೆಯಾದ ಜೋಡಿ ಕಂಕೈ ನದಿಯಲ್ಲಿ ದೋಣಿ ಮೂಲಕ ಪ್ರಯಾಣಿಸಬೇಕಾದರೆ, ಬಲವಾದ ಪ್ರವಾಹ ಉಂಟಾಗಿದೆ. ಈ ಸಂದರ್ಭ ಎಲ್ಲರೂ ದೋಣಿಯಿಂದ ಇಳಿದು, ನದಿಯಲ್ಲೇ ನಡೆದು ಹೋಗಲು ಮುಂದಾಗಿದ್ದಾರೆ.
ಪತಿ ತನ್ನ ಪತ್ನಿಯನ್ನು ನೀರಿಗೆ ಇಳಿಯಲು ಬಿಡದೇ, ಹೆಗಲ ಮೇಲೆ ಹೊತ್ತು ನದಿ ದಾಟಿಸಿದ್ದಾನೆ.ಈ ಘಟನೆಯ ವಿಡಿಯೋ ಈಗ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.