ಈ ಜೋಡಿ ಪ್ರೀತ್ಸಿ ತಪ್ಪು ಮಾಡಿತಾ..? ಪ್ರೇಮಿಗಳನ್ನು ಮರಕ್ಕೆ ಕಟ್ಟಿ ಥಳಿಸಿದ ಸ್ಥಳೀಯರು..
Tuesday, June 29, 2021
ಬಿಹಾರ:ಪ್ರೇಮಿಗಳಿಬ್ಬರ ನ್ನು ಮರಕ್ಕೆ ಕಟ್ಟಿಹಾಕಿ ಸ್ಥಳೀಯರು ಅಮಾನವೀಯ ರೀತಿಯಲ್ಲಿ ಅವರಿಗೆ ಥಳಿಸಿರುವ ಘಟನೆ ನಡೆದಿದ್ದು, ಇದರ ವಿಡಿಯೋ ಈಗ ವೈರಲ್ ಆಗಿದೆ
ಕೆಲ ತಿಂಗಳಿಂದ ಜೋಡಿಯೊಂದು ಪರಸ್ಪರ ಪ್ರೀತಿಸುತ್ತಿದ್ದರು. ಇಂದು ಬೆಳಗ್ಗೆ ಯುವಕನ ಜೊತೆ ಯುವತಿ ಹೊರಗಡೆ ಹೋಗುತ್ತಿದ್ದ ವೇಳೆ ಅವರನ್ನ ಕಟ್ಟಿಹಾಕಿ ಅಮಾನವೀಯ ರೀತಿಯಲ್ಲಿ ಥಳಿಸಿದ್ದಾರೆ. ಅವರು ಕ್ಷಮಿಸುವಂತೆ ಎಷ್ಟು ಕೇಳಿಕೊಂಡರೂ ಕೂಡ ಸ್ಥಳೀಯರು ಕರುಣೆ ತೋರಿಸಲಿಲ್ಲ.
ಗ್ರಾಮಸ್ಥರು ಪ್ರೇಮಿಗಳಿಗೆ ಥಳಿಸಿರುವ ವಿಡಿಯೋ ವೈರಲ್ ಆಗಿದ್ದು, ಪೊಲೀಸರು ಈ ಬಗ್ಗೆ ಪ್ರಕರಣ ದಾಖಲು ಮಾಡಿದ್ದು, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.