
ವೇಶ್ಯಾವಾಟಿಕೆ ದಂಧೆ ಆರೋಪ - 12 ಮಹಿಳೆಯರು ಸೇರಿ 28 ಮಂದಿ ಅರೆಸ್ಟ್...
Tuesday, June 29, 2021
ನೋಯ್ಡಾ (ಉತ್ತರ ಪ್ರದೇಶ): ಮಾಡಿದ ಪೊಲೀಸರು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ 12 ಮಹಿಳೆಯರು ಸೇರಿದಂತೆ 28 ಜನರನ್ನು ಬಂಧಿಸಿದ್ದಾರೆ.
ಮನೆಯೊಂದರಲ್ಲಿ ಅಕ್ರಮ ಮಾಂಸ ವ್ಯಾಪಾರ ಮತ್ತು ದಂಧೆ ನಡೆಸುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಮಾಹಿತಿ ಆಧರಿಸಿ, ಸೆಕ್ಟರ್ 49ರ ಪೊಲೀಸ್ ಠಾಣೆ ಪ್ರದೇಶದಲ್ಲಿನ ಮನೆ ಮೇಲೆ ದಾಳಿ ನಡೆಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ರಣವಿಜಯ್ ಸಿಂಗ್ ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಿದ್ದು, ತನಿಖೆ ಮುಂದುವರಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.