ನಾಯಕ ನಟರೇ ‘ಹಸೀನ್ ದಿಲ್ರುಬಾ’ ಸಿನಿಮಾದಲ್ಲಿ ತಾಪ್ಸಿ ಪನ್ನು ಜೊತೆ ಬೋಲ್ಡ್ ದೃಶ್ಯದಲ್ಲಿ ನಟಿಸಲು ಹೆದರಿದ್ದರಂತೆ
Tuesday, June 29, 2021
ಮುಂಬೈ: ಬೋಲ್ಡ್ ದೃಶ್ಯಗಳಲ್ಲಿ ನಟಿಸೋದು ಕಷ್ಟ, ಹಾಗಾಗಿ ಬಹಳಷ್ಟು ಜನ ನಟಿಮಣಿಯರು ಇಂತಹ ದೃಶ್ಯಗಳಲ್ಲಿ ನಟಿಸೋದಕ್ಕೆ ಹಿಂದೇಟು ಹಾಕುತ್ತಾರೆ. ಆದರೆ, ನಾಯಕಿಯೇ ಹಸಿಬಿಸಿ ದೃಶ್ಯದಲ್ಲಿ ನಟಿಸಲು ಧೈರ್ಯ ತುಂಬಿದರೂ, ನಾಯಕರೇ ಹಿಂದೇಟು ಹಾಕುವುದು ಬಹಳ ಸ್ವಲ್ಪ ವಿರಳವೇ ಸರಿ.
ಏಕೆ ಇಷ್ಟೊಂದು ಪೀಠಿಕೆ ಅಂದ್ಕೊಂಡ್ರಾ ‘ಹಸೀನ್ ದಿಲ್ರುಬಾ’ ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ಜುಲೈ 2ರಂದು ಸ್ಟ್ರೀಮ್ ಆಗಲಿದೆ. ಈ ಸಿನಿಮಾದಲ್ಲಿ ನಟಿ ತಾಪ್ಸಿ ಪನ್ನು ಜೊತೆಗೆ ವಿಕ್ರಾಂತ್ ಮಸ್ಸೆ ಮತ್ತು ಹರ್ಷವರ್ಧನ್ ರಾಣೆ ನಾಯಕರಾಗಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಸಾಕಷ್ಟು ಬೋಲ್ಡ್ ದೃಶ್ಯಗಳಿದ್ದು, ಆ ದೃಶ್ಯಗಳಲ್ಲಿ ನಟಿಸುವುದಕ್ಕೆ ಇಬ್ಬರು ಹೀರೋಗಳು ಸಹ ಹಿಂದೇಟು ಹಾಕಿದ್ದರು ಎಂದು ತಾಪ್ಸಿ ಹೇಳಿಕೊಂಡಿದ್ದಾರೆ.
ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಈ ವಿಚಾರವನ್ನು ಬಿಚ್ಚಿಟ್ಟ ಅವರು, ‘ ‘ಹಸೀನ್ ದಿಲ್ರುಬಾ’ ಸಿನಿಮಾದಲ್ಲಿ ಒಂದಿಷ್ಟು ಬೋಲ್ಡ್ ದೃಶ್ಯಗಳಿವೆ. ನಾಯಕ ನಟರಾದ ವಿಕ್ರಾಂತ್ ಮತ್ತು ಹರ್ಷವರ್ಧನ್ ಇಬ್ಬರ ಜತೆಗೂ ಇಂತಹ ದೃಶ್ಯಗಳಿವೆ. ಆದರೆ ಇಬ್ಬರೂ ನನ್ನ ಹತ್ತಿರ ಬರುವುದಕ್ಕೂ ಹೆದರುತ್ತಿದ್ದರು. ಚಿತ್ರೀಕರಣ ಸಂದರ್ಭದಲ್ಲಿ ಬಹಳ ಮುಜುಗರಕ್ಕೊಳಗಾಗಿರುವ ಇಬ್ಬರೂ, ಟೇಕ್ ಮೇಲೆ ಟೇಕ್ ತೆಗೆದುಕೊಂಡಿದ್ದಾರೆ. ಕೊನೆಗೆ ನಿರ್ದೇಶಕರು ಇಬ್ಬರಿಗೂ ಒಂದಿಷ್ಟು ಅರ್ಥ ಮಾಡಿಸಿದ ಮೇಲೆ, ದೃಶ್ಯಗಳ ಚಿತ್ರೀಕರಣ ಸರಾಗವಾಗಿ ಆಯಿತು’ ಎಂದು ತಾಪ್ಸಿ ಹೇಳಿಕೊಂಡಿದ್ದಾರೆ.