
WHATSAPP ಗೆ ಶೀಘ್ರವೇ ಹೊಸ ಸೌಲಭ್ಯ: ಝುಕರ್‌ಬರ್ಗ್ ಘೋಷಣೆ
Monday, June 7, 2021
ವಾಷಿಂಗ್ಟನ್: ವಾಟ್ಸ್‌ಆ್ಯಪ್‌ಗೆ ಶೀಘ್ರವೇ ಹೊಸ ಸೌಲಭ್ಯಗಳನ್ನು ಸೇರ್ಪಡೆಗೊಳಿಸುವುದಾಗಿ, ಅದರ ಮಾಲಕತ್ವ ಹೊಂದಿರುವ ಫೇಸ್‌ಬುಕ್‌ನ ಸಂಸ್ಥಾಪಕ ಮಾರ್ಕ್ ಝುಕರ್‌ಬರ್ಗ್ ತಿಳಿಸಿದ್ದಾರೆ.
'ಡಿಸೆಪ್ಪಿಯರಿಂಗ್ ಮೋಡ್’, “ವ್ಯೂ ಒನ್ಸ್’ ಹಾಗೂ “ಮಲ್ಟಿ ಡಿವೈಸ್’ ಎಂಬ ಫೀಚರ್‌ಗಳನ್ನು ಸೇರ್ಪಡೆಗೊಳಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. “ಡಿಸೆಪ್ಪಿಯರಿಂಗ್ ಮೋಡ್’ ಎಂಬ ಈ ಸೌಲಭ್ಯದಿಂದಾಗಿ ವಾಟ್ಸ್‌ಆ್ಯಪ್ ಬಳಕೆದಾರರು ಹಂಚಿಕೊಳ್ಳುವ ಸಂದೇಶಗಳು, ಫೋಟೊಗಳು, ವೀಡಿಯೋಗಳು ಮತ್ತಷ್ಟು ಖಾಸಗಿಯನ್ನಾಗಿಸಲಿದೆ.
'ವ್ಯೂ ಒನ್ಸ್’ ಫೀಚರ್‌ನಡಿ ಬಳಕೆದಾರರು ತಮಗೆ ಬಂದಿರುವ ಸಂದೇಶ ಹಾಗೂ ಯಾವುದೇ ಮಿಡಿಯಾ ಫೈಲ್‌ಗಳನ್ನು ಕೇವಲ ಒಮ್ಮೆ ಮಾತ್ರ ವೀಕ್ಷಿಸಬಹುದು. ಅದನ್ನು ವೀಕ್ಷಿಸಿದೊಡನೆ ತನ್ನಿಂತಾನೇ ಸಂದೇಶ ಡಿಲೀಟ್ ಆಗುತ್ತದೆ. ಹಾಗೆಯೇ “ಮಲ್ಟಿ ಡಿವೈಸ್’ ಫೀಚರ್‌ನಡಿ, ಬಳಕೆದಾರರು ಇಂಟರ್ನೆಟ್ ಇಲ್ಲದೆಯೇ ಒಂದಕ್ಕಿಂತ ಹೆಚ್ಚು ಇಲೆಕ್ಟ್ರಾನಿಕ್ ಪರಿಕರಗಳಲ್ಲಿ ವಾಟ್ಸ್‌ಆ್ಯಪ್ ಅನ್ನು ಬಳಸಬಹುದು ಎಂದು ಝುಕರ್‌ಬರ್ಗ್ ವಿವರಿಸಿದ್ದಾರೆ.