-->

ವಿವಾಹವಾಗುತ್ತಾನೆಂದು ನನ್ನದೆಲ್ಲವನ್ನು ಕಳೆದುಕೊಂಡೆ... ಗಲ್ಲು ಶಿಕ್ಷೆ ನೀಡಿ ಆತನಿಗೆ: ವೀಡಿಯೋ ಮಾಡಿ ಯುವತಿ ಆತ್ಮಹತ್ಯೆ (video)

ವಿವಾಹವಾಗುತ್ತಾನೆಂದು ನನ್ನದೆಲ್ಲವನ್ನು ಕಳೆದುಕೊಂಡೆ... ಗಲ್ಲು ಶಿಕ್ಷೆ ನೀಡಿ ಆತನಿಗೆ: ವೀಡಿಯೋ ಮಾಡಿ ಯುವತಿ ಆತ್ಮಹತ್ಯೆ (video)


ದಾವಣಗೆರೆ: ವಿವಾಹವಾಗುತ್ತಾನೆ ಎಂದು ತಿಳಿದು ನನ್ನೆದೆಲ್ಲವನ್ನು ಕಳೆದುಕೊಂಡೆ. ಈತನಿಗೆ ಗಲ್ಲು ಶಿಕ್ಷೆ ನೀಡಿ ಎಂದು ಬೆಸ್ಕಾಂ ನೌಕರನನ್ನು ಪ್ರೇಮಿಸಿ ಮೋಸ ಹೋದ ಯುವತಿಯೊಬ್ಬಳು ಆತನ ವಿರುದ್ಧ ವೀಡಿಯೋ ಚಿತ್ರೀಕರಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.




 ನಗರದ ಭರತ್ ಕಾಲೊನಿ ನಿವಾಸಿ ಆಶಾ (24) ಆತ್ಮಹತ್ಯೆಗೀಡಾದ ಯುವತಿ. ಮೋಸ ಮಾಡಿದ ಪ್ರೇಮಿಗೆ ಗಲ್ಲು ಶಿಕ್ಷೆ ಕೊಡಿಸಿ ಎಂದು ಯುವತಿ ವೀಡಿಯೋ ಚಿತ್ರೀಕರಣ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಆತ್ಮಹತ್ಯೆ ಮಾಡಿಕೊಂಡ ಯುವತಿ ಆಶಾ, ಬಂಬೂ ಬಜಾರ್ ನಿವಾಸಿ ಈರಣ್ಣ ಎಂಬಾತನನ್ನು ಪ್ರೀತಿಸುತ್ತಿದ್ದಳು. ಬೆಸ್ಕಾಂ ನೌಕರನಾಗಿರುವ ಈರಣ್ಣ ಮದುವೆಯಾಗುವುದಾಗಿ ನಂಬಿಸಿ ಆಶಾಳಿಂದ 2 ಲಕ್ಷ ರೂ. ಹಾಗೂ ಚಿನ್ನಾಭರಣವನ್ನು ಪಡೆದಿದ್ದ. ಅಲ್ಲದೆ ಪ್ರೀತಿಸುವ ನೆಪದಲ್ಲಿ ಆಕೆಯನ್ನು ಬಳಸಿಕೊಂಡಿದ್ದ. ಬಳಿಕ ಮದುವೆಯಾಗುವುದಿಲ್ಲವೆಂದು ಹೇಳಿದ್ದಾನೆ. ಅದಲ್ಲದೆ ಆತನಿಗೆ ಇದಾಗಲೇ ಮದುವೆಯಾಗಿರುವುದು ಆಶಾಳಿಗೆ ತಿಳಿದಿದೆ. 

ಇದರಿಂದ ನೊಂದ ಆಶಾ ವೀಡಿಯೋ  ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವೀಡಿಯೋದಲ್ಲಿ 'ಪ್ರೀತಿಸಿದವನಿಂದ ಎಲ್ಲವನ್ನೂ ಕಳೆದುಕೊಂಡಿದ್ದೇನೆ, ಈರಣ್ಣ ನನಗೆ ಮೋಸ ಮಾಡಿದ್ದಾನೆ, ಅವನು ಸರಿಯಿಲ್ಲ ಎಂದು ನನ್ನ ಅಪ್ಪ ಅಮ್ಮ ಹೇಳಿದರೂ ಕೇಳಲಿಲ್ಲ. ಅವನನ್ನೇ ನಂಬಿದೆ. ಮದುವೆಯಾಗಿದ್ದರೂ ಆಗಿಲ್ಲ ಎಂದು ಸುಳ್ಳು ಹೇಳಿದ್ದಾನರ. ಈಗ ನನಗೆ ಬದಕುವ ಅರ್ಹತೆಯಿಲ್ಲ. ಸಾಯಲು ನಿರ್ಧರಿಸಿದ್ದೇನೆ. ಮೋಸ ಮಾಡಿದ ಈರಣ್ಣನಿಗೆ ಗಲ್ಲು ಶಿಕ್ಷೆ ಕೊಡಿಸಿ' ಎಂದು ಆಶಾ ಹೇಳಿದ್ದಾಳೆ. 

ಅಲ್ಲದೆ 'ಕೆಇಬಿಯಲ್ಲಿ ತುಂಬಾ ಮಂದಿ ಹುಡುಗರು ಇದ್ದಾರೆ. ಅಲ್ಲಿ ಇರೋರನ್ನು ಯಾರೂ ನಂಬಬೇಡಿ. ನಂಬಿ ಮೋಸ ಹೋಗಬೇಡಿ. ಪ್ರೀತಿಯ ಹೆಸರಿನಲ್ಲಿ ನನ್ನಂತೆ ಯಾರೂ ಮೋಸ ಹೋಗಬೇಡಿ.  ಸಾಯುವುದೊಂದೇ ದಾರಿಯಾಗುತ್ತದೆ' ಎಂದು ಹೇಳಿ‌ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಈ ಬಗ್ಗೆ ದಾವಣಗೆರೆಯ ಆರ್‌ಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99