Mangalore- ಕಸ ವಿಂಗಡಿಸಿ ನೀಡದಿದ್ದರೆ ತೆರಬೇಕು ದಂಡ- ಈ ಅಪಾರ್ಟ್ಮೆಂಟ್ ಗೆ 53 ಸಾವಿರ ಪೆನಾಲ್ಟಿ!
Monday, June 7, 2021
ಮಂಗಳೂರು; ಮಂಗಳೂರಿನಲ್ಲಿ ಹಸಿ ಕಸ, ಒಣ ಕಸ ವಿಂಗಡನೆ ಮಾಡದಿದ್ದರೆ ದಂಡ ವಿಧಿಸಲು ಮಹಾನಗರ ಪಾಲಿಕೆ ಆರಂಭಿಸಿದೆ.
ಮಂಗಳೂರಿನಲ್ಲಿ ಕಸ ಸಂಗ್ರಹಕ್ಕೆ ಬರುವ ಸ್ವಚ್ಚತಾ ಕಾರ್ಮಿಕರಿಗೆ ಕಸವನ್ನು ನೀಡುವಾಗಲೇ ವಿಂಗಡಿಸಿ ನೀಡಬೇಕು. ಶುಕ್ರವಾರದಂದು ಒಣಕಸ,ಶುಕ್ರವಾರ ಹೊರತುಪಡಿಸಿ ಉಳಿದೆಲ್ಲ ದಿನಗಳಲ್ಲಿ ಹಸಿ ಕಸ ನೀಡಬೇಕು. ಆದರೆ ಇದನ್ನು ಹೆಚ್ಚಿನವರು ಪಾಲಿಸುತ್ತಿಲ್ಲ.
ಹೀಗೆ ಪಾಲಿಸದ ಮಂಗಳೂರಿನ ಅಪಾರ್ಟ್ಮೆಂಟ್ ಗೆ ಬರೋಬರಿ 53 ಸಾವಿರ ದಂಡ ವಿಧಿಸಲಾಗಿದೆ. ಚಿಲಿಂಬಿಯ ಮಾರ್ಸ್ ಆ್ಯಂಡ್ ವೇನಸ್ ಅಪಾರ್ಟ್ಮೆಂಟ್ ಗೆ 53 ಸಾವಿರ ದಂಡ ವಿಧಿಸಲಾಗಿದೆ. ಇಲ್ಲಿ 106 ಪ್ಲ್ಯಾಟ್ ಇದ್ದು ಪ್ರತಿ ಪ್ಲ್ಯಾಟ್ ಗೆ 500 ದಂಡ ವಿಧಿಸಲಾಗಿದ್ದು, ಒಟ್ಟು ದಂಡದ ಮೊತ್ತ 53 ಸಾವಿರ ಆಗಿದೆ. ದಂಡದ ಮೊತ್ತ ಪಾವತಿಸದಿದ್ದಲ್ಲಿ ನೀರಿನ ಸಂಪರ್ಕ ಕಡಿತಗೊಳಿಸುವ ಎಚ್ಚರಿಕೆ ನೀಡಲಾಗಿದೆ.