-->

14 ರ ಬಾಲಕನ ಜೊತೆಗೆ ಆಂಟಿ ಲವ್- ಲವ್ವಿಡವ್ವಿ ಮಾಡಿ ಪರಾರಿ!

14 ರ ಬಾಲಕನ ಜೊತೆಗೆ ಆಂಟಿ ಲವ್- ಲವ್ವಿಡವ್ವಿ ಮಾಡಿ ಪರಾರಿ!


ರಾಯ್ಪುರ: ಎರಡು‌ ಮಕ್ಕಳಿರುವ  ಮಹಿಳೆಯೊರ್ವಳು 14 ವರ್ಷದ ಬಾಲಕನನ್ನೇ ಪ್ರೀತಿಸಿ ಆತನೊಂದಿಗೆ ಓಡಿ ಹೋಗಿರುವ ವಿಚಿತ್ರ ಘಟನೆ ಛತ್ತೀಸಗಢದ ಕೋರಬಾದದಲ್ಲಿ ನಡೆದಿದೆ. ಇದೀಗ ಇಬ್ಬರೂ ಸಿಕ್ಕಿಬಿದ್ದಿದ್ದು, ಮಹಿಳೆಯ ವಿರುದ್ಧ ಪ್ರಕರಣ ದಾಖಲಾಗಿದೆ.

ಗಂಡ ಸರಕಾರಿ ನೌಕರರಾಗಿದ್ದು, ಯಾವುದಕ್ಕೂ ಕೊರತೆಯಿಲ್ಲ ಎನ್ನಲಾಗುತ್ತಿದೆ. ಆದರೆ ಆ ಮಹಿಳೆಗೆ ಅದೇನಾಗಿತ್ತೋ,14ರ ಬಾಲಕನೊಂದಿಗೆ ಲವ್ವಿ ಡವ್ವೀ‌ ಆರಂಭಿಸಿದ್ದಾಳೆ. ಅದಲ್ಲದೆ ಆತನೊಂದಿಗೇ ಬದುಕಬೇಕೆಂದು ಹಟತೊಟ್ಟು ಆತನನ್ನು ಕರೆದುಕೊಂಡು ಓಡಿ ಹೋಗಿದ್ದಳು.

 ಈ ವಿಚಾರವಾಗಿ ಎರಡೂ ಕುಟುಂಬಗಳ ಸದಸ್ಯರು ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದು, ದೂರು ದಾಖಲಿಸಿದ್ದಾರೆ. ತಕ್ಷಣ ಕಾರ್ಯಪ್ರವರ್ತರಾದ ಪೊಲೀಸರು ಇವರಿಬ್ಬರ ಹುಡುಕಾಟ ಆರಂಭಿಸಿದ್ದಾರೆ. ಈ ಜೋಡಿ ಜಾಂಜಗೀರ-ಚಂಪಾ ಪ್ರದೇಶದಲ್ಲಿ ಸುತ್ತಾಡುತ್ತಿದ್ದು ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದರು. ಅವರನ್ನು ವಾಪಸು ಕರೆದುಕೊಂಡು ಬಂದ ಪೊಲೀಸರು ಮಹಿಳೆಯ ವಿರುದ್ಧ ಪೊಕ್ಸೊ ಕಾಯ್ದೆಯಡಿ ಎಫ್​ಐಆರ್​ ದಾಖಲಿಸಿದ್ದಾರೆ. ಬಾಲಕನನ್ನು ಆತನ ಮನೆಗೆ ವಾಪಸು ಕಳುಹಿಸಿಕೊಡಲಾಗಿದೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99