ಕೊರಿಯ ಯುವತಿ ಹಾಡಿದ ಕನ್ನಡ ಹಾಡು...ನೀವು ಮೋಡಿಯಾಗುವುದು ಖಂಡಿತ! (Video)
Tuesday, June 29, 2021
ಪುನೀತ್ ರಾಜ್ಕುಮಾರ್ ನಟನೆಯ ಯುವರತ್ನ ಸಿನಿಮಾದ ‘ನೀನಾದೇನಾ…’ ಹಾಡನ್ನು ಕೊರಿಯಾದ ಯುವತಿಯೊಬ್ಬರು ಹಾಡಿದ್ದು ಸಾಕಷ್ಟು ವೈರಲ್ ಆಗುತ್ತಿದೆ.
ಪುನೀತ್ ರಾಜ್ ಕುಮಾರ್ ನಟನೆಯ 'ಯುವರತ್ನ' ಸಿನಿಮಾದ 'ನೀನಾದೇನಾ...’ ಹಾಡಿಗೆ ಎಸ್. ಥಮನ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಅರ್ಮಾನ್ ಮಲಿಕ್, ಶ್ರೇಯಾ ಘೋಷಾಲ್ ಈ ಹಾಡನ್ನು ಹಾಡಿದ್ದಾರೆ.
ದೊಡ್ಡ ಮಟ್ಟದಲ್ಲಿ ಹಿಟ್ಟಾಗಿ ಎಲ್ಲರ ಮನಗೆದ್ದ ಈ ಹಾಡನ್ನು ಇದೀಗ ಕೊರಿಯಾ ಯುವತಿ ಹಾಡಿದ್ದಾರೆ. ಈ ಹಾಡು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಕೊರಿಯಾದ ಯುವತಿಯ ಕನ್ನಡ ಪ್ರೇಮ ಅನೇಕರಿಗೆ ಇಷ್ಟವಾಗಿದೆ. ರಾಕೇಶ್ ಗಿರೀಶ್ ಎಂಬುವವರು ಈ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.