-->

ಹ್ಯಾಕ್ ಮಾಡಿರೋದಕ್ಕೂ ಲಕ್ಷಾಂತರ ರೂ. ಸಂಭಾವನೆ ಪಡೆದ ಯುವತಿ!

ಹ್ಯಾಕ್ ಮಾಡಿರೋದಕ್ಕೂ ಲಕ್ಷಾಂತರ ರೂ. ಸಂಭಾವನೆ ಪಡೆದ ಯುವತಿ!


ನವದೆಹಲಿ: ಹ್ಯಾಕ್ ಮಾಡಿ ಸಿಕ್ಕಿಬಿದ್ದು ಜೈಲುವಾಸ ಮಾಡಿದವರು ಎಷ್ಟೋ ಮಂದಿಯಿದ್ದಾರೆ‌. ಆದರೆ ಇಲ್ಲೊಬ್ಬಳು ಹ್ಯಾಕ್​ ಮಾಡಿರೋದಕ್ಕೆ ಬರೋಬ್ಬರಿ 22 ಲಕ್ಷ ರೂ ಸಂಭಾವನೆ ಪಡೆದಿದ್ದಾಳೆ ಎಂದರೆ ನೀವು ನಂಬಲೇಬೇಕು.

ಹೀಗೆ ಹ್ಯಾಕ್​ ಮಾಡಿ ಲಕ್ಷಾಂತರ ರೂ. ಗಿಟ್ಟಿಸಿಕೊಂಡಿರುವ ಯುವತಿ ದೆಹಲಿ ನಿವಾಸಿಯಾಗಿರುವ ಅದಿತಿ ಸಿಂಗ್(20). ಈಕೆ ಎಥಿಕಲ್ ಹ್ಯಾಕರ್ ಆಗಿದ್ದಾಳೆ.‌ ಆದರೆ ಈಕೆ ಹ್ಯಾಕ್ ಮಾಡಿದ್ದು ಅಂತಿಂಥ ಕಂಪೆ‌ನಿಗಳನ್ನಲ್ಲ. ಮೈಕ್ರೋಸಾಫ್ಟ್​ ಹಾಗೂ ಫೇಸ್​ಬುಕ್​ ಕಂಪನಿಗಳ ಐಟಿ ವ್ಯವಸ್ಥೆಯನ್ನು ಹ್ಯಾಕ್ ಮಾಡಿದ್ದಕ್ಕೆ ಈಕೆಗೆ ಲಕ್ಷಾಂತರ ರೂ. ಆ ಕಂಪನಿಗಳಿಂದಲೇ ಸಿಕ್ಕಿದೆ. ಈಕೆ ಮೈಕ್ರೋಸಾಫ್ಟ್ ಕಂಪನಿಯ ಅಜ್ಯೂರ್ ಕ್ಲೌಡ್ ಸಿಸ್ಟಮ್​ನಲ್ಲಿ ರಿಮೋಟ್ ಕೋಡ್ ಎಕ್ಸಿಕ್ಯೂಷನ್​(ಆರ್​ಸಿಇ) ಬಗ್ ಇರುವುದನ್ನು ಕಂಡುಹಿಡಿದಿದ್ದಾಳೆ. ಇದಕ್ಕೋಸ್ಕರ ಮೈಕ್ರೋಸಾಫ್ಟ್ ಕಂಪನಿ ಈಕೆಗೆ 22 ಲಕ್ಷ ರೂ. ಬಹುಮಾನವಾಗಿ ಕೊಟ್ಟಿದೆ. 

ಅದಲ್ಲದೆ ಎರಡು ತಿಂಗಳ ಹಿಂದೆ ಫೇಸ್​ಬುಕ್​ ಹ್ಯಾಕ್ ಮಾಡಿರುವ ಈಕೆ ಅಲ್ಲಿಯೂ ಇಂಥದ್ದೇ ಬಗ್​ ಕಂಡುಹಿಡಿದಿದ್ದಾಳಂತೆ. ಇದಕ್ಕಾಗಿ ಫೇಸ್​ಬುಕ್ ಸಂಸ್ಥೆ ಕೂಡ  5.50 ಲಕ್ಷ ರೂ. ಬಹುಮಾನ ನೀಡಿದೆ. ಈ ಥರದ ಬಗ್​ ಕಂಡುಹಿಡಿದ ಮೊದಲಿಗಳು ಎಂಬ ಹೆಗ್ಗಳಿಕೆ ಅದಿತಿಯದ್ದಾಗಿದ್ದು, ಈಕೆ ಹ್ಯಾಕ್ ಮಾಡಿ ಈ ಬಗ್​ ಕುರಿತು ಮೈಕ್ರೋಸಾಫ್ಟ್​ನವರಿಗೆ ತಿಳಿಸಿದರೂ ಅವರು ಅದನ್ನು ವಿಶ್ಲೇಷಿಸಿ, ಎಲ್ಲವೂ ಸುರಕ್ಷಿತವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು 2 ತಿಂಗಳು ಬೇಕಾಯಿತಂತೆ. 

ಕಳೆದ ಎರಡು ವರ್ಷಗಳಿಂದ ಅದಿತಿ ಸಿಂಗ್ ಎಥಿಕಲ್ ಹ್ಯಾಕಿಂಗ್​ನಲ್ಲಿ ತೊಡಗಿಸಿಕೊಂಡಿದ್ದು, ಮೊದಲಿಗೆ ನಮ್ಮ ಪಕ್ಕದ ಮನೆಯವರ ವೈಫೈ ಪಾಸ್​ವರ್ಡ್ ಹ್ಯಾಕ್ ಮಾಡಿದ್ದೆ. ಆ ಬಳಿಕ ಹಿಂದೆ ತಿರುಗಿ ನೋಡದೆ ಹ್ಯಾಕಿಂಗ್​ನಲ್ಲಿ ಮುಂದುವರಿದಿದ್ದೇನೆ ಎಂದು ಅದಿತಿ ಹೇಳಿಕೊಂಡಿದ್ದಾರೆ. 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99