
ಚಿಕ್ಕಮ್ಮ ನನ್ನೇ ಪ್ರೀತಿಸಿ ಮದುವೆಯಾದ ಯುವಕ.. ಏನಿದು ವಿಚಿತ್ರ ಲವ್ ಸ್ಟೋರಿ ...!!
Tuesday, June 29, 2021
ಪಾಟ್ನಾ(ಬಿಹಾರ): ಸಂಬಂಧದಲ್ಲಿ ಚಿಕ್ಕಮ್ಮನಾಗಬೇಕಾಗಿದ್ದ ಯುವತಿಯನ್ನು, ಯುವಕನೊಬ್ಬ ಮದುವೆ ಮಾಡಿಕೊಂಡ ಘಟನೆ ಬಿಹಾರದ ಜಮುಯಿಯಲ್ಲಿ ನಡೆದಿದ್ದು, ಅದರ ವಿಡಿಯೋ ವೈರಲ್ ಆಗುತ್ತಿದೆ.
ಸಂಬಂಧದಲ್ಲಿ ಚಿಕ್ಕಮ್ಮನಾಗಬೇಕಿದ್ದರೂ ಇವರಿಬ್ಬರ ನಡುವೆ ಪರಸ್ಪರ ಪ್ರೀತಿ ಉಂಟಾಗಿದ್ದ ಕಾರಣ ಮೇಲಿಂದ ಮೇಲೆ ಫೋನ್ನಲ್ಲಿ ಮಾತನಾಡಲು ಶುರು ಮಾಡುತ್ತಾರೆ. ಇದಾದ ಬಳಿಕ ಭೇಟಿ ಸಹ ಆಗಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಯುವತಿ ಮನೆಯಿಂದ ಓಡಿಹೋಗಿದ್ದು, ಇಬ್ಬರೂ ಮದುವೆ ಮಾಡಿಕೊಂಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಈಗ ವೈರಲ್ ಆಗಿದೆ.