ಬಾಂಗ್ಲಾ ಮೂಲದ ಮಹಿಳೆಯನ್ನು ವರಿಸಲು ಗಡಿದಾಟಿದ ಭಾರತೀಯ ಅರೆಸ್ಟ್....
Tuesday, June 29, 2021
ಕೋಲ್ಕತ್ತಾ: ಬಾಂಗ್ಲಾ ಮೂಲದ ಮಹಿಳೆಯನ್ನು ವರಿಸಲು
ಕಾನೂನು ಬಾಹಿರವಾಗಿ ಅಂತರಾಷ್ಟ್ರೀಯ ಗಡಿ ದಾಟಿದ ಹಿನ್ನೆಲೆಯಲ್ಲಿ ಭಾರತೀಯ ಮೂಲದ ವ್ಯಕ್ತಿಯನ್ನು ಬಂಗಾಳದ ನಡಿಯಾ ಜಿಲ್ಲೆಯಲ್ಲಿ ಬಂಧಿಸಿದ್ದಾರೆ.
ಯುವಕನನ್ನು ಜೈಕಾಂತ್ ಚಂದ್ರ ರೈ(24) ಎಂದು ಗುರುತಿಸಲಾಗಿದ್ದು, ಈತ ನಡಿಯಾ ಜಿಲ್ಲೆಯ ಬಲ್ಲಾವ್ ಪುರ ಗ್ರಾಮದವನು. 18 ವರ್ಷದ ಯುವತಿ ಬಾಂಗ್ಲಾದೇಶದ ನೆರೈಲ್ ಮೂಲದವಳು. ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾಗಿ ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸಿದ್ದು ಮದುವೆಯಾಗಬೇಕೆಂದು ನಿರ್ಧರಿಸಿದ್ದರು. ಇದಕ್ಕಾಗಿ ಮಾರ್ಚ್ 8 ರಂದು ತಾರಕ್‍ನಗರದಿಂದ ಅಪ್ಪು ಎಂಬ ಬ್ರೋಕರ್ ಸಹಾಯದಿಂದ ಬಾಂಗ್ಲಾದೇಶಕ್ಕೆ ಹೋಗಿದ್ದಾನೆ.
ಜೂನ್ 26ರಂದು ಸಂಜೆ ಬಿಎಸ್‍ಎಫ್ ಇಂಟಲಿಜೆನ್ಸಿಗೆ ಮಾಹಿತಿಯೊಂದು ರವಾನೆಯಾಗಿತ್ತು. ಈ ಮಾಹಿತಿಯ ಆಧಾರದ ಮೇಲೆ ಮಧುಪುರ ಗಡಿ ಹೊರಠಾಣೆ ಕರ್ತವ್ಯದಲ್ಲಿದ್ದ 82 ಬೆಟಾಲಿಯನ್ ಪಡೆಗಳನ್ನು ಎಚ್ಚರಿಸಲಾಯಿತು. ಸಂಜೆ 4:15 ರ ಸುಮಾರಿಗೆ ಭದ್ರತಾ ಸಿಬ್ಬಂದಿ ದಂಪತಿಯನ್ನು ಗಡಿ ರಸ್ತೆಯಲ್ಲಿ ಗುರುತಿಸಿದರು. ಸದ್ಯ ಇಬ್ಬರನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಭಿಂಪುರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.