ಸೊಸೆಯ ಅಕ್ರಮ ಸಂಬಂಧ- ಬಲಿಯಾಗಿದ್ದು ಮಾತ್ರ ಅತ್ತೆ ..ಕೊಲೆಯ ಮಾಸ್ಟರ್ ಪ್ಲಾನ್ ಯಾರದ್ದು ಗೊತ್ತಾ..?
Tuesday, June 29, 2021
ತುಮಕೂರು: ಅತ್ತೆ ಇದ್ದರೆ ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿ ಆಗುತ್ತೆ ಎಂದು ತನ್ನ ಪ್ರಿಯಕರನ ಜೊತೆ ಸೇರಿ ಅತ್ತೆಯನ್ನೆ ಸೊಸೆ ಕೊಲೆ ಮಾಡಿಸಿ ಈಗ ಜೈಲು ಸೇರಿದ್ದಾರೆ.
ಶಿರಾ ತಾಲೂಕು ಗೌಡಗೆರೆ ಹೋಬಳಿ ಉಜ್ಜನಕುಂಟೆ ಗ್ರಾಮದ ಸುಧಾಮಣಿ(28) ಹಾಗೂ ಆಕೆಯ ಪ್ರಿಯಕರ ಶ್ರೀರಂಗಪ್ಪ(35) ಬಂಧಿತರು. ಜೂನ್ 24ರಂದು ಸರೋಜಮ್ಮ(65) ಎಂಬ ಮಹಿಳೆ ತನ್ನ ವಾಸದ ಮನೆಯಲ್ಲಿ ಬೆಂಕಿ ಹಚ್ಚಿಕೊಂಡು ಮೃತಪಟ್ಟಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿತ್ತು. ಈ ಹಿನ್ನೆಲೆಯಲ್ಲಿ ತಾವರೆಕೆರೆ ಪಿಎಸ್‍ಐ ಪಾಲಾಕ್ಷಪ್ರಭು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆಗ ಘಟನೆಯು ಆಕಸ್ಮಿಕವಾಗಿ ನಡೆದಿಲ್ಲ ಎಂಬ ಶಂಕೆ ವ್ಯಕ್ತವಾಯಿತು. ಈ ಬಗ್ಗೆ ವಿಚಾರಣೆ ಕೈಗೊಂಡ ಪೊಲೀಸರಿಗೆ ಸೊಸೆ ಸುಧಾಮಣಿಯ ಬಗ್ಗೆ ಅನುಮಾನ ವ್ಯಕ್ತವಾಯಿತು.
ಈ ಬಗ್ಗೆ ಪೊಲೀಸರು ವಿಚಾರಣೆ ಕೈಗೊಂಡಾಗ ತಿಳಿದುಬಂದಿದ್ದೇನೆಂದರೆ ಸೊಸೆ ಸುಧಾಮಣಿ ಹಾಗೂ ಅವಳ ಪ್ರಿಯಕರ ಶ್ರೀರಂಗಪ್ಪನ ನಡುವೆ ಅಕ್ರಮ ಸಂಬಂಧ ಇದ್ದಿದ್ದು ಇದಕ್ಕೆ ಅತ್ತೆ ಸರೋಜಮ್ಮ ಅಡ್ಡಿಯಾಗಿದ್ದ ಳು. ಹಾಗಾಗಿ ಸೊಸೆ ಸುಧಾಮಣಿ ತನ್ನ ಪ್ರಿಯಕರನೊಂದಿಗೆ ಸೇರಿ ಅತ್ತೆಯನ್ನು ಕೊಲೆ ಮಾಡುವ ಪ್ಲಾನ್ ಮಾಡಿದ್ದಾಳೆ. ಅವಳ ಪ್ಲಾನಿನಂತೆ ಶ್ರೀರಂಗಪ್ಪ ಪೆಟ್ರೋಲ್ ತಂದುಕೊಟ್ಟಿದ್ದು, ಸರೋಜಮ್ಮರ ಮೇಲೆ ಸುಧಾಮಣಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾಳೆ. ಈಗ ಈ ಇಬ್ಬರೂ ಆರೋಪಿಗಳು ಜೈಲು ಪಾಲಾಗಿದ್ದಾರೆ.