ಪ್ರೀತಿ ನಿರಾಕರಣೆ- ಪ್ರಿಯಕರನ ದುಬಾರಿ ಬೈಕಿಗೆ ಬೆಂಕಿ ಹಚ್ಚಿದ ಯುವತಿ..
Tuesday, June 29, 2021
ಬ್ಯಾಂಕಾಕ್: ತನ್ನ ಪ್ರೀತಿಯನ್ನು ನಿರಾಕರಿಸಿದ ಎಂಬ ಕಾರಣಕ್ಕೆ ಮಾಜಿ ಪ್ರಿಯಕರನ ಬೈಕಿಗೆ ದುಬಾರಿ ಬೈಕಿಗೆ ಮಹಿಳೆಯೊಬ್ಬಳು ಬೆಂಕಿ ಹಚ್ಚಿದ್ದಾಳೆ.
ಥೈಲ್ಯಾಂಡ್‍ನ 36 ವರ್ಷದ ಮಹಿಳೆಯೊಬ್ಬಳು ತನ್ನ ಪ್ರಿಯಕರನಿಗೆ 23 ಲಕ್ಷ ರೂ. ಮೌಲ್ಯದ ಟ್ರಯಂಫ್ ಬೈಕ್ ಅನ್ನು ಉಡುಗೊರೆಯಾಗಿ ನೀಡಿದ್ದಳು. ಆದರೆ ಅವರಿಬ್ಬರ ನಡುವೆ ಬ್ರೇಕ್ ಆಪ್ ಆದ ನಂತರ ತನ್ನ ಮಾಜಿ ಪ್ರಿಯಕರನ ವಿರುದ್ಧ ಸೇಡು ತೀರಿಸಿಕೊಳ್ಳುವ ಸಲುವಾಗಿ ಬೈಕನ್ನೇ ಸುಟ್ಟುಹಾಕಿದ್ದಾಳೆ.
ಈ ವೀಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಘಟನೆ ವೇಳೆ ತನ್ನ ಮಾಜಿ ಪ್ರಿಯಕರನ ಬೈಕ್ ಜೊತೆಯಲ್ಲಿಯೇ ನಿಲ್ಲಿಸಿದ್ದ ಇನ್ನೂ ಆರು ಬೈಕ್‍ಗಳಿಗೆ ಬೆಂಕಿ ತಗುಲಿ ಸುಟ್ಟು ಕರಕಲಾಗಿದೆ.