ಕೂದಲೇ ಉಡುಪದಾಗ..!! ಈಕೆಯ ಈ ನ್ಯೂ ಸ್ಟೈಲ್ ನೋಡಿದ್ರೆ ಖಂಡಿತ ನೀವೂ ಫಿದಾ ಆಗ್ತೀರಾ...
Tuesday, June 29, 2021
ಬೆಂಗಳೂರು: ತನ್ನ ಉದ್ದ ಕೂದಲನ್ನು ಉಡುಪಾಗಿ ಮಾಡಿಕೊಂಡು ಕೂದಲಿನಿಂದಲೇ ತನ್ನ ದೇಹವನ್ನು ಪೂರ್ತಿ ಮುಚ್ಚಿಕೊಂಡು ಸ್ಟೈಲಿಶ್ ಆಗಿ ಕಾಣಿದ ಮಹಿಳೆಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಮಹಿಳೆಯೊಬ್ಬಳು ತನ್ನ ಉದ್ದ ಕೂದಲಿನೊಂದಿಗೆ ಹೊಸ ಸ್ಟೈಲ್ ಮಾಡಿದ್ದಾಳೆ. ಬಟ್ಟೆ ಬದಲು ಕೂದಲನ್ನೇ ಬಟ್ಟೆ ರೀತಿಯಲ್ಲಿ ವಿನ್ಯಾಸ ಮಾಡಿಕೊಂಡಿದ್ದಾಳೆ. ಕೂದಲನಿಂದ ಪೂರ್ತಿ ದೇಹವನ್ನು ಮುಚ್ಚಿಕೊಂಡು ಅದಕ್ಕೆ ಬೆಲ್ಟ್ ಒಂದನ್ನು ತೊಟ್ಟಿದ್ದಾಳೆ. ತಲೆಗೊಂದು ಹ್ಯಾಟ್ ತೊಟ್ಟು, ಸನ್ಗ್ಲಾಸ್ ಒಂದನ್ನು ಹಾಕಿಕೊಂಡಿದ್ದಾಳೆ. ಉದ್ದನೆಯ ಕೂದಲನೊಂದಿಗೆ ಆಕೆ ಮಾಡಿಕೊಂಡ ಸ್ಟೈಲ್ಗೆ ನೆಟ್ಟಿಗರು ಫಿದಾ ಆಗಲಾರಂಭಿಸಿದ್ದಾರೆ.
ಈಕೆಯ ಸ್ಟೈಲನ್ನು ಸಾವಿರಾರು ಜನರು ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. .