
OTP ಇಲ್ಲದೆ ಶಿಕ್ಷಕಿಯ 3 ಲಕ್ಷ ಮಾಯ- ಸಿಕ್ಕಿಬಿದ್ದ ಕಳ್ಳ ಯಾರು ಗೊತ್ತಾ?
ಛತ್ತಿಸ್ ಗಡ: ಶಿಕ್ಷಕಿ ಶುಭ್ರಾ ಪಾಲ್ ಅವರ ಬ್ಯಾಂಕ್ ಖಾತೆಯಿಂದ 3.22 ಲಕ್ಷ ರೂಪಾಯಿ ನಾಪತ್ತೆಯಾಗಿದ್ದು ಕಕ್ಕಾಬಿಕ್ಕಿಯಾದ ಅವರು, ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸಿ ಕಳ್ಳನನ್ನು ಕೂಡ ಹಿಡಿದಿದ್ದಾರೆ. ಆದರೆ ಆ ಕಳ್ಳ ಯಾರು ಎಂದು ಗೊತ್ತಾದಾಗ ಎಲ್ಲರಿಗೂ ಆಶ್ಚರ್ಯವಾಗಿದೆ.
ಶಿಕ್ಷಕಿ ಶುಭ್ರಾ ಪಾಲ್ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಿದಾಗ ಹಣ ನಾಪತ್ತೆಯಾಗಿರುವುದು ತಿಳಿದಿದೆ. ಯಾರಾದರೂ ದುಡ್ಡನ್ನು ಡ್ರಾ ಮಾಡಿಕೊಂಡರೆ ಸಹಜವಾಗಿ ಮೊಬೈಲ್‌ಫೋನ್‌ಗೆ ಓಟಿಪಿ ಬರುತ್ತದೆ. ಆದರೆ ಮಹಿಳೆ ಫೋನ್ ಚೆಕ್ ಮಾಡಿದಾಗ ಅದರಲ್ಲಿ ಓಟಿಪಿ ಕೂಡ ಇರಲಿಲ್ಲ.
ಓಟಿಪಿಯೂ ಇಲ್ಲದೇ ಹಣ ಕದ್ದಿದ್ದಾರೆ. ಹಾಗಾದರೆ ಇವರೆಂತಹ ಕ್ರಿಮಿನಲ್ಗಳು ಇರಬಹುದು ಎಂದು ಪೊಲೀಸರಿಗೂ ಕೂಡ ಆಶ್ಚರ್ಯವಾಗಿದೆ. ಇನ್ನಷ್ಟು ತನಿಖೆ ನಡೆಸಿದಾಗ ಅವರ 12 ವರ್ಷದ ಮಗನೇ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.
‘ಫ್ರೀ ಫೈರ್’ ಎಂಬ ಆಟವಾಡಲು ಈತ ಹೀಗೆ ಮಾಡಿದ್ದಾನೆ. ಆ ಆಟದಲ್ಲಿ ಮುಂದಿನ ಸ್ಟೆಪ್ ಹೋಗಲು ಹಣವನ್ನು ನೀಡಬೇಕಿತ್ತು. ಆಗ ಆನ್‌ಲೈನ್ ವ್ಯವಹಾರವನ್ನು ತಿಳಿದಿದ್ದ ಮಗ, ಅಮ್ಮನ ಮೊಬೈಲ್‌ನಲ್ಲಿಯೇ ಆಟವಾಡುತ್ತಿದ್ದರಿಂದ ಸುಲಭದಲ್ಲಿ ಅಲ್ಲಿಂದ ಹಣವನ್ನು ವರ್ಗಾಯಿಸುತ್ತಾ ಬಂದಿದ್ದಾನೆ. ಓಟಿಪಿ ಬಂದಾಗ ಅದನ್ನು ಡಿಲೀಟ್ ಮಾಡಿದ್ದಾನೆ.