ಸಿಸಿಟಿವಿ ರಿಪೇರಿ ಮಾಡುವವನಿಗೆ ಸಿಕ್ತು ದಂಪತಿಗಳ ಖಾಸಗಿ ವಿಡಿಯೋ... ಮುಂದೆ..??
Tuesday, June 29, 2021
ನವದೆಹಲಿ: ಸಿಸಿಟಿವಿ ರಿಪೇರಿ ಮಾಡುವ ನೆಪದಲ್ಲಿ ಬಂದು ಖಾಸಗಿ ವಿಡಿಯೋಗಳನ್ನು ಕಾಪಿ ಮಾಡಿಕೊಂಡು ಸೇವ್ ಮಾಡಿಟ್ಟುಕೊಂಡು ನಂತರ ಅದನ್ನು ದಂಪತಿಗಳಿಗೆ ಕಳಿಸಿ ಅವರಿಂದ ಹಣ ವಸೂಲಿ ಮಾಡಿಕೊಂಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ
ಕರಣ್ ಅಹುಜಾ ದಂಪತಿಗೆ ಓರ್ವ ಮಗುವಿದ್ದು, ಇವರು ಕೆಲಸಕ್ಕೆ ಹೋಗುವ ಸಂದರ್ಭ ಮಗುವನ್ನು ನೋಡಿಕೊಳ್ಳಲು ಬೇಬಿಸಿಟ್ಟರ್ ಒಬ್ಬರನ್ನು ನೇಮಿಸಿದ್ದಾರೆ. ಅಲ್ಲದೆ, ಮಗುವಿನ ರಕ್ಷಣೆ ಬಗ್ಗೆ ನಿಗಾವಹಿಸಲು ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸಿದ್ದಾರೆ. ಸಿಸಿಟಿವಿ ದುರಸ್ತಿಗೆ ಬಂದಿದ್ದರಿಂದ ಟೆಕ್ನಿಷಿಯನ್ ಒಬ್ಬರಿಗೆ ಕರೆ ಮಾಡಿ ರಿಪೇರಿ ಮಾಡಲು ಬರಹೇಳುತ್ತಾರೆ. ಆತ ರಿಪೇರಿ ಮಾಡಿ ಹೋದ ನಂತರ ಅಹುಜಾ ಅವರ ಮೊಬೈಲ್ ವಾಟ್ಸ್ಆ್ಯಪ್ಗೆ ಅಪರಿಚಿತ ನಂಬರ್ನಿಂದ ಕೆಲವು ವಿಡಿಯೋಗಳು ಬರುತ್ತವೆ. ಅದರಲ್ಲಿ ಅಹುಜಾ ತನ್ನ ಪತ್ನಿಯೊಂದಿಗೆ ಸರಸ ಸಲ್ಲಾಪದಲ್ಲಿ ತೊಡಗಿರುವ ದೃಶ್ಯಗಳು ಇರುತ್ತವೆ.
ಸ್ವಲ್ಪ ಸಮಯದ ನಂತರ ಅದೇ ನಂಬರ್ ಇಂದ ಫೋನ್ ಕೂಡ ಬರುತ್ತೆ, ಆ ಸಂದರ್ಭದಲ್ಲಿ ಆತ ನಾನು ಹೇಳಿದಷ್ಟು ಹಣ ಕೊಡಬೇಕು ಇಲ್ಲದಿದ್ದರೆ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೇನೆ ಎಂದು ಹೇಳುತ್ತಾನೆ. ದಂಪತಿಗಳು ಅವನು ಹೇಳಿದಷ್ಟು ಹಣಕೊಟ್ಟರೂ ಕೂಡ ಆತ ವಿಡಿಯೋ ಡಿಲೀಟ್ ಮಾಡುವುದಿಲ್ಲ. ಆತ ಮತ್ತೆ ಮತ್ತೆ ಹಣ ಕೇಳಲು ಪ್ರಾರಂಭಿಸಿದಾಗ ಅಹುಜಾ ಈ ಬಗ್ಗೆ ಪೊಲೀಸರಿಗೆ ದೂರು ನೀಡುತ್ತಾರೆ.ಪೊಲೀಸರು ಆರೋಪಿ ರಶೀದ್ ಎಂಬಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗುತ್ತಾರೆ.