
ಏಳನೇ ತರಗತಿ ಸ್ಟೂಡೆಂಟ್ ಗೆ 'LOVE LETTER' ಬರೆದ ಟೀಚರ್....ತಲೆ ಬೋಳಿಸಿ, ಮುಖಕ್ಕೆ ಮಸಿ ಬಳಿದ ಪೋಷಕರು..!!
Tuesday, June 29, 2021
ಶಿಕ್ಷಕನೊಬ್ಬ ತನ್ನ ವಿದ್ಯಾರ್ಥಿನಿಗೆ ಪ್ರೇಮ ಪತ್ರ ಬರೆದು ನೀನು ನನ್ನನ್ನು ಒಪ್ಪಿಕೊಳ್ಳದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ನೀಡಿದ್ದಾನೆ. ಈ ಘಟನೆ ಮಧ್ಯಪ್ರದೇಶದ ಇಂದೋರ್ ಬಳಿ ನಡೆದಿದೆ.
ಶಿಕ್ಷಕ ವೈಭವ್ (24 ) ಒಂದು ವರ್ಷದಿಂದ ಏಳನೇ ತರಗತಿಯ ವಿದ್ಯಾರ್ಥಿನಿಯನ್ನು ಇಷ್ಟಪಡುತ್ತಿದ್ದ. ಆಕೆಗೆ ಪ್ರೇಮಪತ್ರ ಕೂಡ ಬರೆದಿದ್ದ, ನನ್ನ ಪ್ರೀತಿ ಒಪ್ಪಿಕೊಳ್ಳಬೇಕು ನನಗೆ ದಿನಾಲೂ ಕರೆ ಮಾಡಬೇಕು ಇಲ್ಲದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಕೂಡ ನೀಡಿದ್ದ.
ಹೆದರಿದ ವಿದ್ಯಾರ್ಥಿನಿ ತನ್ನ ಪೋಷಕರಿಗೆ ವಿಷಯ ತಿಳಿಸಿದ್ದು, ಪೋಷಕರು, ಸ್ಥಳೀಯರು ಸೇರಿ ವೈಭರ್‌ಗೆ ಥಳಿಸಿ, ಆತನ ತಲೆ ಬೋಳಿಸಿ, ಮುಖಕ್ಕೆ ಮಸಿ ಬಳಿದು ಮೆರವಣಿಗೆ ಮಾಡಿಸಿ ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ.