ಮಹಿಳೆಯರ ಭೂತೋಚ್ಛಾಟನೆ ನಡೆಸುತ್ತಿದ್ದ 30 ಮಂದಿ ಪೊಲೀಸ್ ವಶ...
Monday, June 28, 2021
ಪ್ರಯಾಗ್ರಾಜ್ : ಭೂತೋಚ್ಛಾಟನೆ ನಡೆಸುತ್ತಿದ್ದ 30 ಜನರನ್ನು ಪೊಲೀಸರು ಬಂಧಿಸಿರುವ ಘಟನೆ ಉತ್ತರಪ್ರದೇಶದ ಪ್ರಯಾಗ್ರಾಜ್ ಜಿಲ್ಲೆಯಲ್ಲಿ ಸಂಭವಿಸಿದೆ.
ಉ.ಪ್ರ.ದ ಮಹೋಬಾ ಮತ್ತು ಛತ್ತರಪುರ ಜಿಲ್ಲೆಗಳ ನಿವಾಸಿಗಳಾದ ಆರೋಪಿಗಳು ಸಂಗಂ ನದಿಯ ತೀರದಲ್ಲಿ ಡ್ರಂಗಳನ್ನು ಬಾರಿಸುತ್ತಾ ಮಹಿಳೆಯರ ಕೈಕಾಲು ಕಟ್ಟಿ, ಚಾಟಿಯಿಂದ ಹೊಡೆಯುತ್ತ ಭೂತ ಬಿಡಿಸುವ ಪ್ರಯತ್ನ ಮಾಡುತ್ತಿದ್ದು ಮಹಿಳೆಯರನ್ನು ಹೊಡೆಯುತ್ತ, ಕೂದಲು ಹಿಡಿದು ಎಳೆಯುತ್ತಿದ್ದರು. ನಿಂಬೆಹಣ್ಣು, ಕುಂಕುಮ ಮುಂತಾದ ಸಾಮಗ್ರಿಗಳನ್ನು ಹಿಡಿದು ಅವರ ಮೈಮೇಲೆ ಬಂದಿರುವ ದುಷ್ಟ ಶಕ್ತಿಗಳನ್ನು ಓಡಿಸುವುದಾಗಿ ಹೇಳಿಕೊಳ್ಳುತ್ತಿದ್ದರು ಎನ್ನಲಾಗಿದೆ.
ಈ ರೀತಿಯಾಗಿ ಭೂತೋಚ್ಛಾಟನೆ ಮಾಡುತ್ತಿದ್ದವರು ಈಗ ಪೊಲೀಸರ ವಶವಾಗಿದ್ದಾನೆ.